Jalasiri Payment: ಜಲಸಿರಿ ನೀರಿನ ಶುಲ್ಕ ಪಾವತಿಸಲು ಮಹಾನಗರಪಾಲಿಕೆ ಸೂಚನೆ

ದಾವಣಗೆರೆ (Jalasiri Payment): ಮಹಾನಗರಪಾಲಿಕೆ ವತಿಯಿಂದ ಜಲಸಿರಿ ಯೋಜನೆಯಡಿಯಲ್ಲಿ ನೀರಿನ ಶುಲ್ಕ ಪಾವತಿಸುತ್ತಿರುವ ನೀರಿನ ಬಳಕೆಗೆ ಅನುಗುಣವಾಗಿ ನಿಗದಿಪಡಿಸಿರುವ ನೀರಿನ ದರಗಳ ಪ್ರಕಾರ ಪರಿಮಾಣಾಧಾರಿತ ನೀರಿನ ಶುಲ್ಕದ ಬಿಲ್ಲುಗಳನ್ನು ನೀಡಲಾಗುತ್ತಿದ್ದು, ಬಿಲ್ಲಿನಲ್ಲಿ ನಮೂದಿಸಿರುವ ನೀರಿನ ಶುಲ್ಕವನ್ನು ಕಡ್ಡಾಯವಾಗಿ ಮಹಾನಗರಪಾಲಿಕೆಯ ಆವರಣದಲ್ಲಿರುವ ಗ್ರಾಹಕರ ಸೇವಾಕೇಂದ್ರ, ನಿಟ್ಟುವಳ್ಳಿ ಉದ್ಯಾನವನದಲ್ಲಿರುವ ಗ್ರಾಹಕರ ಸೇವಾ ಕೇಂದ್ರದಲ್ಲಿ ಮತ್ತು ಆಶ್ರಯ ಆಸ್ಪತ್ರೆ ಪಕ್ಕದ ಮಹಾನಗರಪಾಲಿಕೆಯ ವಲಯ ಕಛೇರಿ-03 ರ ಜಲಸಿರಿ ಕೌಂಟರ್‍ನಲ್ಲಿ ನಗದು ರೂಪದಲ್ಲಿ ಪಾವತಿಸಬೇಕು..
ಆನ್ ಲೈನ್ ಮುಖಾಂತರ ಕೂಡ ಪಾವತಿಸಲು ಜಲಸಿರಿ ಆಪ್ಲಿಕೇಶನ್ ಅಥವಾ www.Davangerewater.co.in ಮುಖಾಂತರವೂ ಪಾವತಿಸಬಹುದು. ನೀರಿನ ಶುಲ್ಕವನ್ನು ನಿಗಧಿತ ಸಮಯದಲ್ಲಿ ಪಾವತಿಸದೇ ಇದ್ದಲ್ಲಿ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗುವುದು.
24/7 ನೀರು ಸರಬರಾಜಿಗೆ ಸಂಬಂದಿಸಿದಂತೆ ಯಾವುದೇ ತೊಂದರೆಗಳಿದ್ದಲ್ಲಿ ಗ್ರಾಹಕರ ಸೇವಾ ಕೇಂದ್ರದ ಸಂಖ್ಯೆ 9036544419 ವನ್ನು ಸಂಪರ್ಕಸಬಹುದೆಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.