NIMHANS: ಶಾಸಕ ಬಿಪಿ ಹರೀಶ್‌ ಮಾನಸಿಕ ಅಸ್ವಸ್ಥ: ನಿಮಾನ್ಸ್‌ ನಲ್ಲೇ ಚಿಕಿತ್ಸೆ ಪಡೆಯಬೇಕು: ಸಾಗರ್‌ ಎಲ್‌ ಎಂ ಹೆಚ್‌

NIMHANS_ MLA BP Harish mentally ill

ದಾವಣಗೆರೆ: (NIMHANS) ಶಾಸಕ ಬಿಪಿ ಹರೀಶ್‌ ಅವರಿಗೆ ಶಾಮನೂರು ಕುಟುಂಬದವರನ್ನು ಸ್ಮರಿಸಿಕೊಳ್ಳದಿದ್ದರೆ ನಿದ್ದೆನೇ ಬರೋದಿಲ್ಲ, ದೊಡ್ಡವರ ಬಗ್ಗೆ ಮಾತನಾಡಿದರೆ ದೊಡ್ಡವರಾಗುತ್ತೇನೆ ಎಂದು ಅವರ ಕಟುಂಬದ ಬಗ್ಗೆಯೇ ಸದಾ ಜಪಿಸುತ್ತಾರೆ.

ಎಲುಬಿಲ್ಲದ ನಾಲೆಗೆ ಎಂಬಂತೆ ನಾಲಿಗೆ ಹರಿದು ಬಿಡುವ ಮೂಲಕ ತಮ್ಮ ಯೋಗ್ಯತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಮಹಾನಗರ ಪಾಲಿಕೆ ಸದಸ್ಯರು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಸಾಗರ್ ಎಲ್ ಎಂ ಹೆಚ್ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ಅಧಿಕಾರಿಗಳೊಂದಿಗೆ ಸಮನ್ವಯತೆ ಇಲ್ಲದೆ ಇವರು ಕೆಲಸ ಮಾಡುತ್ತಿದ್ದಾರೆ. ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳು ನನಗೆ ಗೌರವ ನೀಡುತ್ತಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳುವ ಮೂಲಕ ತಮ್ಮ ಮಾನವನ್ನ ತಾವೇ ಹರಾಜು ಹಾಕಿಕೊಳ್ಳುತ್ತಿದ್ದಾರೆ ಎಂದರು. ಬಿ ಪಿ ಹರೀಶ್‌ ಅವರು ಮಾನಸಿಕ ಅಸ್ವಸ್ಥರಾಗಿದ್ದು, ಮೊದಲು ನಿಮಾನ್ಸ್‌ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ದಾವಣಗೆರೆ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಉಮಾ ಪ್ರಶಾಂತ್‌ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಯಾವುದೋ ಖಾಸಗಿ ಕಾರ್ಯಕ್ರಮಕ್ಕೆ ತೆರಳಿದಾಗ ನನಗೆ ಎಸ್‌ ಪಿ ಅವರು ಮರ್ಯಾದೆ ಕೊಡುತ್ತಿಲ್ಲ ಎಂದು ತುಂಬಾ ಹಗುರವಾಗಿ ಮಾತನಾಡಿದ್ದಾರೆ. ಯಾವ ವ್ಯಕ್ತಿಯೂ ಕೇಳಿ ಮಾರ್ಯಾದೆ ಪಡೆಯುವುದಲ್ಲಾ ಗೌರವ ಪಡೆದುಕೊಲ್ಳುವಂತ ವ್ಯಕ್ತಿತ್ವ ಇಟ್ಟುಕೊಳ್ಳಬೇಕು, ಆ ಯೋಗ್ಯತೆ ತಮಗಿಲ್ಲ ಎಂದು ಹರೀಶ್‌ ಅವರು ಅರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ, ಜನಸ್ನೇಹಿ ಪೊಲೀಸ್‌ ಇಲಾಖೆಯನ್ನಾಗಿ ಮಾರ್ಪಡಿಸಿ ಜಿಲ್ಲೆಯಲ್ಲಿ ಶಾಂತಿಯುತ ವಾತಾವರಣ ನಿರ್ಮಾಣಕ್ಕೆ ಉಮಾ ಪ್ರಶಾಂತ್‌ ಅವರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಒಬ್ಬ ಮಹಿಳಾ ಅದಿಕಾರಿಯಾಗಿ ಯಾವುದೇ ಪುರುಷ ಅದಿಕಾರಿಗೂ ಕಡಿಮೆ ಇಲ್ಲ ಎಂಬಂತೆ ಕರ್ತವ್ಯ ಮಾಡುತ್ತಿದ್ದಾರೆ ಎಂದರು. ಈ ಮೊದಲು ಜಿಲ್ಲಾ ಎಸ್‌ ಪಿ ಕಚೇರಿ ಹೇಗಿತ್ತು ಪ್ರಸ್ತುತ ಹೇಗಿದೆ ಎಂಬುದನ್ನ ನೋಡಿ ತಿಳಿದುಕೊಳ್ಳಬೇಕೆಂದು ಹರೀಶ್‌ ಅವರಿಗೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸಚಿವರಾದ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರು ಹಾಗೂ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರು ದೂರ ದೃಷ್ಟಿಯಿಂದ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿ ಕೆಲಸ ಮಾಡಿಸುತ್ತಿದ್ದಾರೆ. ಇದನ್ನು ನೋಡಿ ಸಹಿಸಿಕೊಳ್ಳಲಾಗದೇ ಬಿ ಪಿ ಹರೀಶ್‌ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.

ಹರಿಹರ ಕ್ಷೇತ್ರದಲ್ಲಿ ಜನರು ಮತ್ತೊಮ್ಮೆ ಆಯ್ಕೆ ಮಾಡಿರುವುದು ಶಾಮನೂರು ಕುಟುಂಬ ಬಗ್ಗೆ ಮಾತನಾಡು ಅಂತ ಅಲ್ಲಾ, ಜಿ. ಎಂ ಸಿದ್ಧೇಶ್ವರ ಕುಟುಂಬದ ಪರವಾಗಿ ಮಾತನಾಡು ಅಂತ ಅಲ್ಲಾ. ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಬೇಕೆಂಬ ಕನಸಿನೊಂದಿಗೆ ಜನ ಆಯ್ಕೆ ಮಾಡಿದ್ದಾರೆ. ಸಿಕ್ಕಿರುವ ಅವಕಾಶದಲ್ಲಿ ಉತ್ತಮ ಕೆಲಸ ಮಾಡಿ ಎಂದು ಶಾಸಕ ಬಿ ಪಿ ಹರೀಶ್‌ ಅವರಿಗೆ ಸಾಗರ್‌ ಎಲ್‌ ಎಂ ಹೆಚ್‌ ಸಲಹೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳು

error: Content is protected !!