BP Harish MLA: ಮಾನಕ್ಕೆ ಕುಂದುಂಟು ಮಾಡಿ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ – FIR ನಲ್ಲಿ ಎಸ್ ಪಿ ಉಮಾ ಪ್ರಶಾಂತ್ ದೂರು

ದಾವಣಗೆರೆ: (BP Harish MLA) ದಾವಣಗೆರೆ ಎಸ್ ಪಿ, ಶಾಮನೂರು ಕುಟುಂಬದ ಪಮೇರಿಯನ್ ನಾಯಿಗಳಾಗಿ ಬಿಟ್ಟಿದಾರೆ, ಅಲ್ಲಿದ್ದವರಿಗೆ ಹಾಗೂ ಉಳಿದವರೆಲ್ಲರಿಗೂ ಕೇಳಿಸಿತು ಇವರಿಗೂ ಕೇಳಿಸ್ತು, ಕೇಳಿಸಿದಂಗೇ ಕೂತಿದ್ದರು, ಎಂದು ಅಪಮಾನಕರವಾಗಿ ಅಸಭ್ಯವಾಗಿ ಮಾತನಾಡಿದ್ದು, ಒಬ್ಬ ಜಿಲಾ ಮಟ್ಟದ ಪೋಲೀಸ್ ಅಧಿಕಾರಿಯಾದ ನನಗೆ ಒಬ್ಬ ಮಹಿಳೆ ಎಂಬುದನ್ನು ಕಡೆಗಣಿಸಿ ಎಲ್ಲ ಮಾದ್ಯಮದವರ ಮುಂದೆ ನನ್ನ ಮಾನಕ್ಕೆ ಕುಂದುಂಟು ಮಾಡುವಂತೆ ಅಪಮಾನಕರವಾಗಿ ಮಾತನಾಡಿರುತ್ತಾರೆ.
ಈ ಎಲ್ಲಾ ವಿಚಾರವು ಮಾದ್ಯಮದವರ ವಿಡಿಯೋ ನೋಡಿ ನನಗೆ ತಿಳಿಯಿತು. ಇದರಿಂದಾಗಿ ನನ್ನ ಮನಸ್ಸಿಗೆ ತೀವ್ರ ಸ್ವರೂಪದ ಆಘಾತ ಮತ್ತು ಘಾಸಿಯಾಯಿತು. ಒಬ್ಬ ಜವಾಬ್ದಾರಿಯುತ ಜನ ಪ್ರತಿನಿಧಿಯಾದ ಶ್ರೀ ಬಿ ಪಿ ಹರೀಶ ರವರು ನನ್ನನ್ನು ಕಾನೂನು ಬದ್ಧ ಕರ್ತವ್ಯ ನಿರ್ವಹಣೆಯಿಂದ ವಿಮುಖ ಗೊಳಿಸಬೇಕೆಂಬ ಉದ್ದೇಶದಿಂದ ಪತ್ರಿಕಾ ಗೋಷ್ಠಿಯಲ್ಲಿ, ಒಬ್ಬ ಮಹಿಳಾ ಪೊಲೀಸ್ ಅಧಿಕಾರಿ ಎಂಬುದನ್ನು ತಿಳಿದೂ ಸಹ ನನ್ನ ವಿರುದ್ಧ
ಅವಾಚ್ಯವಾದ ಮತ್ತು ಮಾನಕ್ಕೆ ಕುಂದುಂಟು ಮಾಡುವ ಮಾತುಗಳನ್ನಾಡಿ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮೇಲ್ಕಂಡ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದೆ ಅಂತಾ ನೀಡಿರುವ ದೂರನ್ನು ಸ್ವೀಕರಿಸಿ 351(2),79,132
ಬಿ ಎನ್ ಎಸ್ – 2023 ರೀತ್ಯಾ ಪ್ರಕರಣವನ್ನು ದಾಖಲಿಸಿರುತ್ತದೆ.