Uma prashanth: ಬಿಪಿ ಹರೀಶ್ ರಿಂದ ಎಸ್ ಪಿ ವಿರುದ್ದ ಅಕ್ಷೇಪಾರ್ಹ ಪದ ಬಳಕೆ, ರಾಜ್ಯ ‌ಮಹಿಳಾ ಅಯೋಗದಿಂದ ಪೂರ್ವ ವಲಯ ಐಜಿಪಿಗೆ ಪತ್ರ

IMG-20250905-WA0010

ದಾವಣಗೆರೆ: (Uma Prashanth) ಎಸ್ ಪಿ ಉಮಾ ಪ್ರಶಾಂತ್ ವಿರುದ್ದ ಶಾಸಕ ಬಿಪಿ ಹರೀಶ್ ಅಕ್ಷೇಪಾರ್ಹ ಪದ ಬಳಕೆ ಪ್ರಕರಣ, ಶಾಸಕರ ಹೇಳಿಕೆ ಖಂಡಿಸಿ ರಾಜ್ಯ ‌ಮಹಿಳಾ ಅಯೋಗದಿಂದ ಪೂರ್ವ ವಲಯ ಐಜಿಪಿಗೆ ಪತ್ರ ಬರೆದಿದೆ.

ದಾವಣಗೆರೆ ಎಸ್ ಪಿ ಉಮಾ ಪ್ರಶಾಂತ್ ಗೆ ಶಾಮನೂರು ಕುಟುಂಬದ ಶ್ವಾನ ಎಂದು ಪದಬಳಕೆ ಮಾಡಿದ್ದ ಹರಿಹರ ಶಾಸಕ ಬಿಪಿ ಹರೀಶ್,  ಮಹಿಳಾ ಅಧಿಕಾರಿ ವಿರುದ್ದ ಈ ರೀತಿ ಪದಬಳಕೆ ಮಾಡಿದ್ದು ಖಂಡನೀಯ, ಶಾಸಕರ ಹೇಳಿಕೆಯನ್ನು ರಾಜ್ಯ ಮಹಿಳಾ ಅಯೋಗ ತೀವ್ರವಾಗಿ ಖಂಡಿಸುತ್ತಿದೆ, ಕೂಡಲೇ ಶಾಸಕ ಬಿಪಿ ಹರೀಶ್ ವಿರುದ್ದ  ಕ್ರಮ ಕೈಗೊಳ್ಳಬೇಕು, ಕೈಗೊಂಡ ಕ್ರಮದ ವರದಿಯನ್ನು ಅಯೋಗಕ್ಕೆ ಕಳುಹಿಸುವಂತೆ ಐಜಿಪಿಗೆ ಸೂಚನೆ ನೀಡಿ ಪತ್ರ ಬರೆದಿದೆ.

ಶಾಸಕರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಹಿಳಾ ಅಯೋಗ ಪೂರ್ವ ವಲಯ ಐಜಿಪಿ ರವರಿಗೆ ಪತ್ರ ಬರೆದು ಹಾಗೂ ಕೆಟಿಜೆ ನಗರ ಪೋಲೀಸ್ ಠಾಣೆಯ ಇನ್ಸಪೆಕ್ಟರ್ ಅವರಿಗೆ ಪ್ರತಿಯನ್ನು ರವಾನೆ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳು

error: Content is protected !!