Navarathri: ಸೆ.22ರಿಂದ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ನವರಾತ್ರಿ ಮಹೋತ್ಸವ

FB_IMG_1757182135726

ದಾವಣಗೆರೆ: (Navarathri) ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ನಿಂದ ಇಲ್ಲಿನ ಹಳೇಪೇಟೆಯ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ನವರಾತ್ರಿ ಮಹೋತ್ಸವ ಹಾಗೂ ಪುರಾಣ ಪ್ರವಚನ ಕಾರ್ಯಕ್ರಮವನ್ನು ಸೆ.22ರಿಂದ ಅ.2ರವರೆಗೆ ಹಮ್ಮಿಕೊಳ್ಳಲಾಗಿದೆ.

ಸೆ.22ರಂದು ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀವಿಘ್ನೇಶ್ವರ ಘಟಸ್ಥಾಪನೆ, ದೀಪಾರಾಧನೆ, ದೇವಿಗೆ ಪಂಚಾಮೃತ ಅಭಿಷೇಕ ಸೇರಿ ವಿವಿಧ ಪೂಜಾಕೈಂಕರ್ಯಗಳು ಜರುಗಲಿವೆ. ಪ್ರತಿದಿನ ಸಂಜೆ 7 ಗಂಟೆಗೆ ದೇವಸ್ಥಾನದ ಪಾದಗಟ್ಟಿಯ ಬಳಿ ಬೈಲಹೊಂಗಲದ ಡಾ. ಶ್ರೀ ಸಿದ್ದೇಶ್ವರ ದೇವರು ಮರಿಕಟ್ಟಿ ಅವರಿಂದ ಶ್ರೀದೇವಿಯ ಪುರಾಣ ಪ್ರವಚನ ನಡೆಯುವುದು. ಸೆ.23ರಿಂದ 29ರವರೆಗೆ ದೇವಿಗೆ ವಿವಿಧ ಅಲಂಕಾರಗಳಲ್ಲಿ ಪೂಜೆ ನಡೆಯಲಿದೆ.

ಸೆ.30ರಂದು ದುರ್ಗಾಷ್ಠಾಮಿ, ಅ.1ರಂದು ಮಹಾನವಮಿ, ಆಯುಧ ಪೂಜೆ ಹಾಗೂ ಅ.2ರಂದು ವಿಜಯ ದಶಮಿ ಆಚರಣೆ ಇರಲಿದೆ. ಅ.3ರಂದು ಕಳಸದ ಪೂಜೆ ಮತ್ತು ಬೆಳಿಗ್ಗೆ 11:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ ಇವರ ಉಪಸ್ಥಿತಿಯಲ್ಲಿ ಮತ್ತು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಶ್ರೀಗಳ ಸಮ್ಮುಖದಲ್ಲಿ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಜರುಗಲಿದೆ. ಅಂದು ಶಾಮನೂರು ಪಾರ್ವತಮ್ಮ ಇವರ ನೆನಪಿನಾರ್ಥ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಅನ್ನಸಂತರ್ಪಣೆ ನಡೆಸಲಿದ್ದಾರೆ.

ಉಚಿತ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ವಧು-ವರರು ತಮ್ಮ ಹೆಸರನ್ನು ನೋಂದಾಯಿಸಲು ಮತ್ತು ಹನ್ನೊಂದು ದಿವಸ ದೇವಿಗೆ ಹೂವಿನ ಅಲಂಕಾರ ಮಾಡಿಸುವ ಭಕ್ತಾದಿಗಳು ಕಚೇರಿ ಮೊ: 9740117272, 9480548466 ಗೆ ಸಂಪರ್ಕಿಸಲು ಟ್ರಸ್ಟ್ ತಿಳಿಸಿದೆ.

ಇತ್ತೀಚಿನ ಸುದ್ದಿಗಳು

error: Content is protected !!