Anna Bhagya: ಅನ್ನಭಾಗ್ಯಕ್ಕೆ ಕನ್ನಭಾಗ್ಯ ಕಲ್ಪಿಸಿದ ಕೈ ಪಕ್ಷದ ಯುವ ನಾಯಕರು.!

25-76

ದಾವಣಗೆರೆ: (Anna Bhagya) ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಯಲ್ಲಿನ ಪ್ರಮುಖ ಯೋಜನೆಯಾದ ಅನ್ನಭಾಗ್ಯ ಯೋಜನೆಯನ್ನು ಸ್ವ ಪಕ್ಷದ ಮುಖಂಡರ ಮೂಗಿನ ನೇರ ತುದಿಯಲ್ಲಿ ಅಕ್ರಮವಾಗಿ ಸದ್ದುಗದ್ದಿಲ್ಲದೆ ನೆಡೆಯುತ್ತಿರುವ ಘಟನಾವಳಿಗಳು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಹೌದು, ತಮ್ಮದೇ ಪಕ್ಷದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರು ಬಡವರು, ಯಾರು ಹಸಿವಿನಿಂದ ನರಳಬಾರದೆಂದು ಅನ್ನಭಾಗ್ಯವನ್ನೇನೋ ಕಲ್ಪಿಸಿದರು. ಆ ಯೋಜನೆಯನ್ನು ಮನೆಮನೆಗೆ ತಲುಪುತ್ತಿದೆಯೋ ಇಲ್ಲವೋ ಎಂಬುದಾಗಿ ಪ್ರಚುರಪಡಿಸಬೇಕಾಗಿದ್ದ ಕಾಂಗ್ರೆಸ್ ಪಕ್ಷದ ಯುವ ಕಟ್ಟಾಳುಗಳೇ ಇದೀಗ ಅದೇ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಕೊಂಡು,ಹೊರ ಜಿಲ್ಲೆಗಳಿಗೆ-ರಾಜ್ಯಗಳಿಗೆ ಮಾರುತ್ತಿರುವ ಸುದ್ದಿ ಇದೇ ದಾವಣಗೆರೆ ಜಿಲ್ಲೆಯ ಮಲೆಬೆನ್ನೂರು-ಹೊನ್ನಾಳಿ ಪಟ್ಟಣದಲ್ಲಿ ಕೇಳಿ ಬರುತ್ತಿದೆ.

ಅದರಲ್ಲೂ ಹೊನ್ನಾಳಿ ಪುರಸಭೆಯ ವ್ಯಾಪ್ತಿಯ ದೊಡ್ಡವರ ಮಕ್ಕಳೇ ಪಡಿತರ ಅಕ್ಕಿಯ ಅಕ್ರಮ ದಂಧೆ ನಡೆಸುತ್ತಿದ್ದು ಆಡಳಿತರೂಢ ಪಕ್ಷದ ನಾಯಕರುಗಳ ಮಕ್ಕಳೇ ಈ ದಂಧೆಯಲ್ಲಿ ನಿರತರಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ದಂಧೆಕೋರರನ್ನು ಮುಟ್ಟುವ ಧೈರ್ಯ ತೋರುತ್ತಿಲ್ಲ ಎಂಬ ಮಾತುಗಳು ಹೊನ್ನಾಳಿ ತಾಲ್ಲೂಕಿನಾದ್ಯಂತ ಕೇಳಿ ಬರುತ್ತಿವೆ.

ದಾವಣಗೆರೆಗೆ ಇಂದು ಆಗಮಿಸಿದ್ದ ಆಹಾರ ಇಲಾಖೆಯ ಸಚಿವರಾದ ಕೆ ಹೆಚ್ ಮುನಿಯಪ್ಪ ರವರು, ಪಡಿತರ ಚೀಟಿ ಅಕ್ರಮದ ಬಗ್ಗೆ ಅನೇಕ ಮಾಹಿತಿ ಇದೆ, ಹಾಗೂ ಅಕ್ರಮವಾಗಿ ಅನ್ನ ಭಾಗ್ಯ ಅಕ್ಕಿ ಸಾಗಾಟದ ಬಗ್ಗೆಯೂ ಕೂಡ ಮಾಹಿತಿ ಇದ್ದು, ಅಕ್ರಮ ನಡೆಸುವವರ ವಿರುದ್ಧ ಕಠಿಣ ಕ್ರಮಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸರ್ಕಾರ ಮುಂದಾಗಿರುವುದನ್ನು ಕಾಣಬಹುದಾಗಿದೆ.

ಇತ್ತೀಚಿನ ಸುದ್ದಿಗಳು

error: Content is protected !!