DHUDA: ದುಡಾ ದಿಂದ ಡಿಸಿ ಕಛೇರಿ ಬಳಿ ಅಳವಡಿಸಿದ್ದ ಎಂ ಎಸ್ ಪೈಪ್ ಮತ್ತು ಕಮಾನಿನ ಬಿಡಿಭಾಗ ಕಳ್ಳತನಕ್ಕೆ ಯತ್ನ, FIR ದಾಖಲು

ದಾವಣಗೆರೆ: (DHUDA) ದಾವಣಗೆರೆ ನಗರದಲ್ಲಿ ಸರ್ಕಾರದ ಸ್ವತ್ತನ್ನು ಕಳ್ಳತನ ಮಾಡುತಿದ್ದ ಪ್ರಕರಣ ದಾಖಲಾಗಿದೆ. ದಾವಣಗೆರೆ ಜಿಲ್ಲಾಧಿಕಾರಿ ಕಛೇರಿ ಬಳಿಯಲ್ಲದ್ದ ಸ್ವಾಗತ ಕೋರುವ ಆರ್ಚ್ ಅನ್ನು ತುಂಡು ತುಂಡಾಗಿ ಕತ್ತರಿಸಿ ಕಳ್ಳತನ ಮಾಡಿಕೊಂಡು ಸಾಗಿಸುವ ಪ್ರಯತ್ನ ನಡೆದಿದ್ದು, ದುಡಾದ ಸಿಬ್ಬಂದಿ ಶಾಮೀಲಾಗಿರುವ ಶಂಕೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಕಳ್ಳತನದ ವಿಚಾರವನ್ನು ದೂಡಾ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಅವರಿಗೆ ಸಾರ್ವಜನಿಕರು ಮಾಹಿತಿ ತಿಳಿಸಿದ್ದಾರೆ. ತಕ್ಷಣ ಅಧ್ಯಕ್ಷರು ದೂಡಾದ ಅಧಿಕಾರಿಗಳಿಗೆ ಎಚ್ಚರಿಸಿ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ. ಆದರೆ ಬಲ್ಲ ಮೂಲಗಳ ಮಾಹಿತಿ ಪ್ರಕಾರ ಕಳ್ಳತನ ಮಾಡುತ್ತಿದ್ದ ಎನ್ನಲಾದ ವ್ಯಕ್ತಿಗೆ ದೂಡಾದ ಸಿಬ್ಬಂದಿಯ ಕೈವಾಡ ಇದೆ ಎನ್ನಲಾಗಿದೆ. ಪೋಲೀಸ್ ಅಧಿಕಾರಿಗಳಿಂದ ಸೂಕ್ತ ತನಿಖೆ ನಡೆದರೆ ನಿಜಾಂಶ ಬಯಲಿಗೆ ಬರಬಹುದಾಗಿದೆ.
ಪ್ರಕರಣದ ಸಂಕ್ಷಿಪ್ತ ಸಾರಾಂಶ: ದಿನಾಂಕ:01.09.2025 ರಂದು 7-00 Pm ಗಂಟೆಯಲ್ಲಿ, ಪಿರ್ಯಾದಿಯಾದ ಶ್ರೀ ಮತಿ ಶ್ವೇತಾ ಕಿರಿಯ ಇಂಜಿನಿಯರ್, ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧೀಕಾರ ದಾವಣಗೆರೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,
ದಾವಣಗೆರೆ ನಗರದ ಶ್ರೀ ಮಲಿಕಾರ್ಜುನ ದ್ವಿಪಥ ರಸ್ತೆಯಲ್ಲಿನ ಮುಖ್ಯ ದ್ವಾರದಲ್ಲಿ, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಈ ಹಿಂದೆ ಸುಮಾರು ಲಕ್ಷಗಳ ವೆಚ್ಚದಲ್ಲಿ ಅಳವಡಿಸಲಾಗಿತ್ತು, ಎಂ ಎಸ್ ಪೈಪ್ ಮತ್ತು ಅಂಗ್ಯೂಲರನಲ್ಲಿನ ಹೆಸರಿನ ಸದರಿ ಕಮಾನಿನ ಬಿಡಿ ಭಾಗಗಳನ್ನು ಸುಮಾರು 1,50,000 ದಷ್ಟು ಬೆಲೆ ಬಾಳುವ ಭಾಗಗಳನ್ನು ದಿನಾಂಕ:31.08.2025 ರಂದು ಸುಮಾರು ಬೆಳಿಗ್ಗೆ 07.30 ರಿಂದ 08.30 ಗಂಟೆಗೆ ಗ್ಯಾಸ್ ವೆಂಡ್ ಮೂಲಕ ಕಳ್ಳತನ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಮಾಹಿತಿಯನ್ನು ನೀಡಿದ್ದರು.
ಸದರಿ ಮಾಹಿತಿ ಮೇರೆಗೆ ಪ್ರಾಧಿಕಾರದ ಕಿರಿಯ ಅಭಿಯಂತರರು ಸ್ಥಳವನ್ನು ಪರಿಶೀಲಿಸಲಾಗಿ, ಕಳ್ಳತನ ಮಾಡುತ್ತಿರುವ ವ್ಯಕ್ತಿಯನ್ನು ತಡೆಯಿಡಿದು, ನದರಿ ಸಾಮಗ್ರಿಗಳನ್ನು ಪ್ರಾಧಿಕಾರದ ಕಛೇರಿಗೆ ವಶಪಡಿಸಿಕೊಳ್ಳಲಾಗಿದೆ, ಕಳ್ಳತನ ಮಾಡುತ್ತಿರುವ ವ್ಯಕ್ತಿಯ ಹೆಸರನ್ನು ವಿಚಾರಿಸಲಾಗಿ ರಿಯಾಜ್ ಎಂದು ಹೇಳಿದ್ದು, ಸದರಿ ವ್ಯಕ್ತಿಯನ್ನು ವಿಚಾರಣೆ ಮಾಡುತ್ತಿರುವ ಸಮಯದಲ್ಲಿ, ಆತನು ಓಡಿ ಹೋಗಿದ್ದು ಸದರಿ ಕಳ್ಳತನ ಮಾಡಿರುವ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸ ಬೇಕೆಂದು ಮೇಲಾಧೀಕಾರಿಗಳೊಂದಿಗೆ ಚರ್ಚಿಸಿ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ ವಿದ್ಯಾನಗರ ಪೋಲಿಸ್ ಠಾಣೆಯಲ್ಲಿ ದೂರು ನೀಡಲಾಯಿತು ಎಂದು ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾಗಿದೆ.ಕಳ್ಳತನ ಮಾಡುತಿದ್ದ ವ್ಯಕ್ತಿಯನ್ನು ಪೋಲೀಸರು ಬಂಧಿಸಿದ್ದು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.
ಒಟ್ಟಾರೆ ಬೃಹತ್ ಗಾತ್ರದ ಕಬ್ಬಿಣ ಹಾಗೂ ಎಂ ಎಸ್ ಪೈಪ್ ತುಂಡರಿಸುವ ಸಾಹಸಕ್ಕೆ ಸಿಬ್ಬಂದಿಗಳ ಸಹಕಾರವಿಲ್ಲದೆ ಧೈರ್ಯವಾಗಿ ಕಳ್ಳತನ ಮಾಡಿಕೊಂಡು ಹೋಗಲು ಸಾಧ್ಯವಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.