ಲಯನ್ಸ್ ಕ್ಲಬ್ ವತಿಯಿಂದ ನಾಳೆ 7 ನೇ ಅಂತರಾಷ್ಟಿಯ ಯೋಗ ದಿನಾಚರಣೆ

ದಾವಣಗೆರೆ: ಲಯನ್ಸ್ ಕ್ಲಬ್ ಹಾಗೂ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ವತಿಯಿಂದ ಆ.೧೦ರ ಇಂದು ಬೆಳಿಗ್ಗೆ ೭ ಗಂಟೆಗೆ ಏಳನೇ ಅಂತರಾಷ್ಟಿಯ ಯೋಗ ದಿನಾಚರಣೆ ಮತ್ತು ಲಯನ್ ವಾಸುದೇವ ರಾಯ್ಕರ್ ಅವರ ಹುಟ್ಟುಹಬ್ಬ ಆಚರಣೆಯನ್ನು ನಗರದ ದೇವರಾಜ್ ಅರಸ್ ಬಡಾವಣೆಯಲ್ಲಿರುವ ಲಯನ್ಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಬದಲ್ಲಿ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಗೆಲುವು ಕಂಡವರಿಗೆ ಬಹುಮಾನ ವಿತರಣೆ,
ರಕ್ತದಾನಿಗಳಿಗೆ ಸನ್ಮಾನ, ಪೋಲೀಸ್ ದುರ್ಗಾಪಡೆಗೆ ಜಾಕೆಟ್ ವಿತರಣೆ, ೧ ನಿಮಿಷದ ಯೋಗ ಗ್ರೂಪ್ ವಿಡಿಯೋ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಓಂಕಾರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದು, ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್. ಓಂಕಾರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೇಯರ್ ಎಸ್.ಟಿ. ವೀರೇಶ್, ಚಿತ್ರದುರ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಈ. ಬಾಲಕೃಷ್ಣ,
ಜವಳಿ ಉದ್ಯಮಿ ಬಿ.ಸಿ. ಉಮಾಪತಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರಗೌಡ, ಲಯನ್ಸ್ ಟ್ರಸ್ಟ್ ಛೇರ್ಮನ್ ಡಾ. ಬಿ.ಎಸ್. ನಾಗಪ್ರಕಾಶ್, ಲಯನ್ಸ್ ಕ್ಲಬ್ ಪ್ರಾಂತಿಯ ಅಧ್ಯಕ್ಷ ಇ.ಎಂ. ಮಂಜುನಾಥ್,
ಕನ್ನಿಕಾಪರಮೇಶ್ವರಿ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷರಾದ ಆರ್.ಜಿ. ಶ್ರೀನಿವಾಸಮೂರ್ತಿ, ಲಯನ್ಸ್ ವಿದ್ಯಾಶಾಲೆ ಕಾರ್ಯದರ್ಶಿ ಬೆಳ್ಳೂಡಿ ಶಿವಕುಮಾರ್, ಶಿರಡಿ ಸಾಯಿಬಾಬಾ ಮಂದಿರ ಕಾರ್ಯದರ್ಶಿ ಶಿವಪ್ಪ, ನಿವೃತ್ತ ಜಿಲ್ಲಾ ಆಯುಷ್ ಅಧಿಕಾರಿ ಡಾ. ಯು. ಸಿದ್ದೇಶಿ, ಲಯನ್ಸ್ ಕ್ಲಬ್ ಜಿಲ್ಲಾ ಸಂಯೋಜಕರು ದೇವರಮನೆ ನಾಗರಾಜ್ ಪಾಲ್ಗೊಳ್ಳಲಿದ್ದಾರೆ.