Hair: ಕೇಶ ವಿನ್ಯಾಸಗಾರರಿಗೆ ಕಿಟ್ ವಿತರಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

7ab00da4-8eb7-4af3-9fe7-ed01300aba74

ದಾವಣಗೆರೆ; (Hair)  ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್‌.ಎಸ್‌.ಮಲ್ಲಿಕಾರ್ಜುನ್ ಅವರ 58ನೇ ಜನ್ಮದಿನದ ಹಿನ್ನೆಲೆಯಲ್ಲಿ  ಜಿಲ್ಲೆಯ ಕೇಶ ವಿನ್ಯಾಸಗಾರರಿಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ತಮ್ಮ ಗೃಹಕಚೇರಿಯ ಆವರಣದಲ್ಲಿ ಮಂಗಳವಾರ ಸುಮಾರು 500  ಕಿಟ್‌ಗಳನ್ನು ವಿತರಿಸಿದರು.

ಈ ಕಾರ್ಯಕ್ರಮವನ್ನು ಎಸ್‌.ಎಸ್‌.ಎಂ. ಫೌಂಡೇಶನ್‌ನಿಂದ ಆಯೋಜಿಸಲಾಗಿತ್ತು. ಈ  ಮೂಲಕ ಸ್ಥಳೀಯ ಕೇಶ ವಿನ್ಯಾಸಗಾರರ ವೃತ್ತಿಜೀವನಕ್ಕೆ ಅಗತ್ಯವಾದ ಆಧಾರವನ್ನು ಒದಗಿಸುವುದರ ಜೊತೆಗೆ, ಅವರ ಸ್ವಾವಲಂಬನೆಗೆ ಬಲ ನೀಡುವ ಮಹತ್ವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಕಿಟ್ ನ ಸಮರ್ಪಕವಾಗಿ ಬಳಕೆ ಮಾಡಿಕೊಂಡು ವೃತ್ತಿಜೀವನ ನಡೆಸಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಎಸ್ ಎಸ್ ಎಂ ಫೌಂಡೇಶನ್ ಮುಖಂಡ, ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಮೇಯರ್ ಚಮನ್ ಸಾಭ್, ಜಮೀರ್ ಸೇರಿದಂತೆ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿಗಳು

error: Content is protected !!