AI Future: ಭವಿಷ್ಯದ ಉದ್ಯೋಗಿಗಳಿಗೆ AI ತರಬೇತಿ.! ದಾವಣಗೆರೆ IT ವಲಯ ಸ್ಥಾಪನೆಗೆ ಸಂಸದೆ ಡಾ ಪ್ರಭಾ ಮಲ್ಲಿಕಾರ್ಜುನ ದಿಟ್ಟ ಹೆಜ್ಜೆ

ದಾವಣಗೆರೆ: (AI Future) ದಾವಣಗೆರೆ ಜಿಲ್ಲಾಡಳಿತ, ದಾವಣಗೆರೆಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ, ಬೆಂಗಳೂರು ವಿಷನ್, ದಾವಣಗೆರೆಯ ಬಿಐಇಟಿ, ಎಸ್ ಟಿ ಪಿ ಐ – ಕೌಶಲ್ಯಾ ಅಭಿವೃದ್ಧಿ ಇಲಾಖೆ ವತಿಯಿಂದ ಭವಿಷ್ಯದ ಉದ್ಯೋಗಿಗಳಿಗೆ ಎಐ ತರಬೇತಿ ಕಾರ್ಯಕ್ರಮವನ್ನು ದಿನಾಂಕ 10.10.2025 ರಂದು ದಾವಣಗೆರೆಯ ಬಿಐಇಟಿ ಆವರಣದಲ್ಲಿನ ಸಭಾಂಗಣದಲ್ಲಿ ಉದ್ಘಾಟನೆಯಾಗಲಿದೆ.
ದಾವಣಗೆರೆ ಜಿಲ್ಲೆಯಲ್ಲಿ ಭವಿಷ್ಯದ ಕಾರ್ಯಪಡೆಯನ್ನು
ತಯಾರು ಮಾಡಲು ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಐಟಿ ವಲಯವು ಕಾರ್ಯಾಚರಣೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ
ಎಸ್ ಎಸ್ ಮಲ್ಲಿಕಾರ್ಜುನ, ಸಂಸದರಾದ ಡಾ|| ಪ್ರಭಾ
ಮಲ್ಲಿಕಾರ್ಜುನರವರ ಪ್ರಯತ್ನದ ಫಲವಾಗಿ ನಾಳೆ ಶುಕ್ರವಾರ ದಿನಾಂಕ 10/10/25 ರಂದು ಎಸ್ ಟಿ ಪಿ ಐ, ಬೆಂಗಳೂರು ವತಿಯಿಂದ ದಾವಣಗೆರೆ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಎಸ್ ಎಸ್ ಎಂ ಸಾಂಸ್ಕೃತಿಕ ಭವನದಲ್ಲಿ ಮುಂಜಾನೆ ಸಮಯ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಂಸದರು, ಜಿಲ್ಲಾ ಶಾಸಕರು,
ಜಿಲ್ಲಾಧಿಕಾರಿಗಳು, ಜಿ.ಪಂ – ಸಿಇಓ, STPI ನಿರ್ದೇಶಕರು, KDEM ಅಧ್ಯಕ್ಷರು ಮತ್ತು KSDA ಅಧ್ಯಕ್ಷರು ಭಾಗವಹಿಸಲಿದ್ದಾರೆ.
ಐಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಇಂಟೆಲ್ ಇಂಡಿಯಾ ಕಂಪನಿಯ ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಐಟಿ ವಲಯವನ್ನು ಸ್ಥಾಪಿಸಲು ದಾವಣಗೆರೆ ಜಿಲ್ಲೆಯ ಸಾರ್ವಜನಿಕರು ಕೈ ಜೋಡಿಸಬೇಕಾಗಿ ಕೋರುತ್ತೇವೆ ಎಂದು ದಾವಣಗೆರೆ ಜಿಲ್ಲಾಡಳಿತ ಹಾಗೂ ಐಟಿ ಕ್ಷೇತ್ರದ ಆಯೋಜಕರು ವಿನಂತಿಸಿದ್ದಾರೆ.