SHG: ಸ್ವ ಸಹಾಯ ಸಂಘ ಗಳ ತಯಾರಿಕಾ ವಸ್ತುಗಳನ್ನು ಉತ್ತೇಜಿಸಿ: ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ

WhatsApp Image 2025-10-11 at 5.50.33 PM (1)
ದಾವಣಗೆರೆ: (SHG ) ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮೀಣ ಭಾಗದ ಸಂಜೀವಿನಿ ಎನ್,ಆರ್,ಎಲ್,ಎಂ ಮಹಿಳಾ ಸ್ವಸಹಾಯ ಸಂಘದವರು ಮಣ್ಣಿನಿಂದ ತಯಾರಿಸಿದ ವಿವಿಧ ಬಗೆಯ ದೀಪಗಳನ್ನು ಖರೀದಿಸುವ ಮೂಲಕ ಮಹಿಳಾ ಸ್ವ ಸಹಾಯ ಸಂಘ ಪ್ರೋತ್ಸಾಹಿಸುವಂತೆ ತಿಳಿಸಿದರು.

ಅವರು ಶನಿವಾರ ಕೆ. ಎಸ್. ಆರ್,ಟಿ,ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮೀಣ ಭಾಗದ ಸಂಜೀವಿನಿ ಎನ್,ಆರ್,ಎಲ್,ಎಂ ಮಹಿಳಾ ಸ್ವಸಹಾಯ ಸಂಘದವರು ಮಣ್ಣಿನಿಂದ ತಯಾರಿಸಿದ ವಿವಿಧ ಬಗೆಯ ದೀಪಗಳ ಮಳಿಗೆ ಯನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣದ ಮಹಿಳಾ ಸಂಘಗಳಿಗೆ ಉತ್ತೇಜಿಸಲು ದೀಪ ಸಂಜೀವಿನಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಮಹಿಳೆಯರು ಬೇರೆ ಬೇರೆ ರೀತಿಯ ಮಣ್ಣಿನ ದೀಪಗಳನ್ನು ಕಪ್ಪು ಮಣ್ಣಿನಿಂದ ಹಾಗೂ ಟೆರಕೋಟ ದಿಂದ ತಯಾರಿಸಿರುವ ದೀಪಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದರು.

ಹೆಚ್ಚು ಮಾರಾಟವಾಗುತ್ತಿರುವ ದೀಪಗಳ ಬಗ್ಗೆ ಗ್ರಾಹಕರ ಅಭಿಪ್ರಾಯವನ್ನು ಪಡೆಯಿರಿ ಮತ್ತು ಮಣ್ಣಿನ ಜಗ್, ಪಾಟ್ ಗಳು, ಚಿಕ್ಕ ಜಗ್ ಗಳನ್ನು ವರ್ಷಪೂರ್ತಿ ಮಾರಾಟ ಮಾಡಲು ಚಿಂತಿಸುವAತೆ ತಿಳಿಸಿದರು ಮುಂದಿನ ವರ್ಷ ಪ್ರಾರಂಭದಲ್ಲಿ ಮಣ್ಣಿನ ದೀಪಗಳು ಹೆಚ್ಚು ಬೇಡಿಕೆ ಆಗುವ ಸಂಭವವಿರುತ್ತದೆ ಎಂದು ಅಭಿಪ್ರಾಯ ಪಟ್ಟರು. ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕಿ ಹಾಗೂ ಇತರರು ಉಪಸ್ಥಿತರಿದ್ದರು

ಇತ್ತೀಚಿನ ಸುದ್ದಿಗಳು

error: Content is protected !!