ಮಹಾನ್ ನಾಯಕರ ಜೀವನ ಚರಿತ್ರೆ ಆದರ್ಶವಾಗಲಿ

IMG-20210815-WA0006

 

ದಾವಣಗೆರೆ:ರಾಷ್ಟ್ರಕ್ಕೆ ತ್ಯಾಗ ಬಲಿದಾನಗಳ ಮೂಲಕ ಸ್ವಾತಂತ್ರ್ಯ ನೀಡಿದಂತಹ ಮಹಾನ್ ನಾಯಕರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬ ಯುವ ಸಮುದಾಯ ತಿಳಿದುಕೊಂಡು ಅವರಿಗೆ ಗೌರವ ಸಲ್ಲಿಸಬೇಕು ಆಗ ನಿಜವಾದ ಸ್ವಾತಂತ್ರೋತ್ಸವಕ್ಕೆ ಅರ್ಥ ಬರುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಸಾಹಿರಾಭಾನು ಫರೂಕಿಯವರು ಹೇಳಿದರು
ಅವರು ಇಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 75ನೆ
ಸ್ವಾತಂತ್ರೊತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಭಾರತ ದೇಶಕ್ಕೆ 1947 ಆಗಸ್ಟ್ 15 ರಂದು ಸ್ವಾತಂತ್ರ್ಯ ಬರಲು ನಮ್ಮ ನಾಯಕರ ಪರಿಶ್ರಮ ತ್ಯಾಗ ಬಲಿದಾನ ಇದೆ. ನಾವೆಲ್ಲರೂ ಸಂಭ್ರಮದಿಂದ ಆಚರಿಸುತ್ತೆವೆoದರೆ ಅವರುಗಳೇ ಕಾರಣ ದೇಶದ ಇತಿಹಾಸವನ್ನು ನಾವು ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಇಂದಿನ ಕರೋನ ದಂತಹ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯ ಉತ್ಸವವನ್ನು ವಿಜೃಂಭಣೆಯಿಂದ ಅಲ್ಲದೆ ಜಾಗರೂಕತೆಯಿಂದ ಆಚರಿಸುವುದು ಸೂಕ್ತ ಇಲ್ಲಿ ಎಲ್ಲರೂ ಜಾಗರೂಕರಾದರೆ ದೇಶವು ಜಾಗೃತವಾಗುತ್ತದೆ ಎನ್ನುವುದನ್ನು ಮರೆಯಬಾರದು ಎಂದು ಹೇಳಿದರು.

ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ ಪ್ರದೀಪ್ ದುದಾನಿ ಅವರು ಸುಮಾರು 39ಸಾವಿರ ಶರ್ಟ್ ಬಟನ್ ಗಳಿಂದ ತಯಾರಿಸಿದ ಭಗತ್ ಸಿಂಗರ ಕಲಾ ಕೃತಿಯನ್ನು ಅನಾವರಣಗೊಳಿಸಿ ಗೌರವ ಸಲ್ಲಿಸಲಾಯಿತು ಹಾಗೂ ಕಲಾಕೃತಿ ಬಿಡಿಸಿದ ವಿದ್ಯಾರ್ಥಿಗೆ ಕಾಲೇಜಿನ ಪ್ರಾಂಶುಪಾಲರು ಅಭಿನಂದಿಸಿದರು.

ಇoದಿನ ಸ್ವಾತಂತ್ರ್ಯೋತ್ಸವದ ಮುಖ್ಯ ಆಕರ್ಷಣೆಯೇ ಭಗತ್ ಸಿಂಗರ ವಿಶೇಷ ಕಲಾಕೃತಿ ಎಂದು ಅಭಿಪ್ರಾಯಪಟ್ಟರು. ನಗರದ ವಿವಿಧ ಕಡೆಯಿಂದ ವಿದ್ಯಾರ್ಥಿಗಳು ಪೋಷಕರು ಹಾಗೂ ಕಾಲೇಜು ಅಧ್ಯಾಪಕರು ಕಲಾಕೃತಿಯನ್ನು ವೀಕ್ಷಿಸಲು ಕಾಲೇಜಿನ ಆವರಣಕ್ಕೆ ಬರುತ್ತಿರುವುದು ಸಾಮಾನ್ಯವಾಗಿತ್ತು ಇದು ವಿಶೇಷ ಮೆರುಗನ್ನು ನೀಡಿತ್ತು
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಯವರು ಹಾಜರಿದ್ದರು. ವಿದ್ಯಾರ್ಥಿನಿ ಕಾವ್ಯಾ ಮತ್ತು ಸಂಗಡಿಗರಿಂದ ದೇಶಭಕ್ತಿ ಗೀತೆಗಳನ್ನು ಹಾಡಿಸಲಾಯಿತು. ಕಾಲೇಜಿನ ಎನ್ ಸಿಸಿ ಸ್ಕೌಟ್ ಗೈಡ್ಸ್ ರೋವರ್ಸ್ ರೇಂಜರ್ಸ್ ಮತ್ತು ಎನ್ನೆಸ್ಸೆಸ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎನ್ ಸಿಸಿ ಆಫೀಸರ್ ಸದಾಶಿವಪ್ಪನವರು ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!