ಆ.19 ರಂದು ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಕೋವಿಶೀಲ್ಡ್, ಕೊವ್ಯಾಕ್ಸಿನ್ 4,000 ಲಸಿಕೆ ಹಂಚಿಕೆ

ದಾವಣಗೆರೆ: ತಾಲ್ಲೂಕಿನ ಗ್ರಾಮೀಣ ಮತ್ತು ನಗರ ಆರೋಗ್ಯ ಕೇಂದ್ರಗಳಲ್ಲಿ ಆ.19 ರಂದು ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಸೇರಿದಂತೆ ಒಟ್ಟು 4,000 ಡೋಸ್ ಲಸಿಕೆ ಹಂಚಿಕೆ ಮಾಡಲಾಗಿದ್ದು, ಗರ್ಭಿಣಿಯರು, ಬಾಣಂತಿಯರು, ಅಪೌಷ್ಠಿಕ ಮಕ್ಕಳ ಪೋಷಕರಿಗೆ ಹಾಗೂ 2ನೇ ಡೋಸ್ ನವರಿಗೆ ಆದ್ಯತೆ ನೀಡಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.
ಕೋವ್ಯಾಕ್ಸಿನ್ ಲಸಿಕೆ ಹಂಚಿಕೆ ಮಾಡಲಾಗಿರುವ ವಿವರ ಇಂತಿದೆ: ಜಿಲ್ಲಾ ಚಿಗಟೇರಿ ಜಿಲ್ಲಾಸ್ಪತ್ರೆ-300 ಡೋಸ್, ಆಜಾದ್ನಗರ-400, ಬಾಷಾ ನಗರ-400, ಭಾರತ್ ಕಾಲೋನಿ-150, ದಾವಣಗೆರೆ ನಗರ ಆರೋಗ್ಯ ಕೇಂದ್ರ-3 ವಾರ್ಡ್ ನಂ.43, ಶಾಮನೂರು-150, ಹೆಚ್ಕೆಆರ್ ನಗರ-150, ಹೊನ್ನೂರು-150, ನಿಟ್ಟುವಳ್ಳಿ-150, ಎಸ್ಎಂಕೆ ನಗರ-150 ಡೋಸ್ ಕೋವ್ಯಾಕ್ಸಿನ್ ಲಸಿಕೆ ಹಂಚಿಕೆ ಮಾಡಲಾಗಿದೆ.
ಕೋವಿಶೀಲ್ಡ್ ಲಸಿಕೆ ಹಂಚಿಕೆ ಮಾಡಲಾಗಿರುವ ಆರೋಗ್ಯ ಸಂಸ್ಥೆಗಳ ವಿವರ ಇಂತಿದೆ: ಆಲೂರು, ಅಣಜಿ, ಅರಸಾಪುರ, ಹೆಬ್ಬಾಳು, ಹೆಮ್ಮನಬೇತೂರು, ಹೂವಿನಮಡು, ಲೋಕಿಕೆರೆ, ಮಳಲ್ಕೆರೆ, ಮಾಯಕೊಂಡ, ನಲಕುಂದ, ಶ್ಯಾಗಲೆ, ತೋಳಹುಣಸೆ ಪ್ರಾ.ಆ.ಕೇಂದ್ರಗಳಿಗೆ ತಲಾ 100 ಡೋಸ್ ಲಸಿಕೆ. ದಾವಣಗೆರೆ ನಗರ ಉಪಕೇಂದ್ರ-2, ದೊಡ್ಡಬಾತಿ, ಹದಡಿ, ಆರ್.ಜಿ.ಹಳ್ಳಿ ಆರೋಗ್ಯ ಕೇಂದ್ರಗಳಿಗೆ ತಲಾ 150 ಡೊಸ್. ದಾವಣಗೆರೆ ನಗರ ಉಪಕೇಂದ್ರ-01 ಕ್ಕೆ 200 ಡೋಸ್ ಕೋವಿಶೀಲ್ಡ್ ಲಸಿಕೆ ಹಂಚಿಕೆ ಮಾಡಲಾಗಿದೆ ಎಂದು ವಿವರಣೆ ನೀಡಿದ್ದಾರೆ.