ತುಂಗಭದ್ರಾ ನದಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಣೆ ಮಾಡಿದ 112 ಇ ಆರ್ ವಿ ಪೊಲೀಸ್
ದಾವಣಗೆರೆ: ಕುಡುಕ ಗಂಡನಿಂದ ಬೇಸತ್ತು ಆತ್ಮಹತ್ಯೆಗೆ ಪ್ರಯತ್ನಿಸಿದ ಮಹಿಳೆಯೋರ್ವರನ್ನು 112 ಇ ಆರ್ ವಿ ಪೊಲೀಸರು ಆಕೆಯನ್ನು ರಕ್ಷಿಸಿರುವ ಘಟನೆ ಗುರುವಾರ ನಡೆದಿದೆ.
ಆಕೆಯ ಪತಿ ಸುಮಾರು ಐದಾರು ವರ್ಷಗಳಿಂದ ಪ್ರತಿದಿನ ಕುಡಿದು ಬಂದು, ಆಕೆಯನ್ನು ಅವಾಚ್ಯವಾಗಿ ನಿಂದಿಸಿ, ಗಲಾಟೆ ಮಾಡುವುದರಿಂದ ಮನನೊಂದು ಆಕೆ ಉಕ್ಕಡಗಾತ್ರಿ ಗ್ರಾಮದ ತುಂಗಭದ್ರ ನದಿಗೆ ತೀರಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ವೇಳೆ ಅಲ್ಲೇ ಸಮೀಪವಿದ್ದ 112 ಇ ಆರ್ ವಿ ಪೊಲೀಸರು ಮಹಿಳೆಯನ್ನು ರಕ್ಷಿಸಿ, ಮಲೆಬೆನ್ನೂರು ಠಾಣೆಯ ಠಾಣಾಧಿಕಾರಿಗಳಿಗೆ ಮುಂದಿನ ಕ್ರಮಕ್ಕೆ ಒಪ್ಪಿಸಿದ್ದಾರೆ.