ಮಿಸ್ ಫೈರಿಂಗ್ ನಿಂದ ಸಾವನ್ನಪ್ಪಿದ್ದ ಪೇದೆ ಚೇತನ್ ಕುಟುಂಬಕ್ಕೆ, ಶಾಸಕ ಮಾಡಾಳು ವಿರುಪಾಕ್ಷಪ್ಪ ಸಾಂತ್ವಾನ

ಚನ್ನಗಿರಿ: ನಿನ್ನೆಯಷ್ಟೆ ಮಿಸ್ ಫೈರಿಂಗ್ ನಿಂದ ಕುತ್ತಿಗೆಗೆ ಗುಂಡು ತಗುಲಿ ಸಾವನ್ನಪ್ಪಿದ್ದ ಸಶಸ್ತ್ರ ಮೀಸಲು ಪಡೆಯ ಕಾನ್ಸೆಟೇಬಲ್ ಚೇತನ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಶಾಸಕ ಮಾಡಾಳು ವಿರೂಪಾಕ್ಷಪ್ಪ ಪಡೆದರು.
ತಾಲ್ಲೂಕಿನ ಮಲಹಾಳ್ ಗ್ರಾಮದಲ್ಲಿ ಚೇತನ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. 28 ವರ್ಷದ ಚೇತನ್ ಆಕಸ್ಮಿಕ ಗುಂಡಿಗೆ ಬಲಿಯಾಗಿದ್ದು, ಕುಟುಂಬದವರ ಆಕ್ರಂಧನ ಮುಗಿಲುಮುಟ್ಟಿತ್ತು.
ತಂದೆ, ತಾಯಿ, ನಾಲ್ಕು ವರ್ಷದ ಪುಟ್ಟ ಕಂದ ಹಾಗೂ ಗರ್ಭಿಣಿಯಾಗಿರುವ ಹೆಂಡತಿಯನ್ನು ಚೇತನ್ ಅಗಲಿದ್ದಾರೆ. ಅವರ ಸಾವಿಗೆ ಕುಟುಂಬ ವರ್ಗ, ಬಂಧು-ಬಳಗ, ಸ್ನೇಹಿತರು ಮತ್ತು ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ.
