ಬಗರ್ ಹೂಕುಂ ಸಾಗುವಳಿದಾರರ ಜಮೀನುಗಳಿಗೆ ತಹಸಿಲ್ದಾರ್ ಭೇಟಿ

ಚನ್ನಗಿರಿ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಬಸವಪಟ್ಟಣ ಹೋಬಳಿಯ ದಾಗಿನಕಟ್ಟೆ ಯಲೋಧಹಳ್ಳಿ ಕಂಚುಗಾರನಹಳ್ಳಿ ನಿಲೋಗಲ್ ಗ್ರಾಮಗಳಿಗೆ ಇಂದು ಚನ್ನಗಿರಿ ತಾಲೂಕು ದಂಡಾಧಿಕಾರಿಗಳು ಹಾಗೂ ಉಪ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿನ್ನೆ ಚನ್ನಗಿರಿ ಪಟ್ಟಣದಲ್ಲಿ ನಡೆದ ಬಗರ್ ಹುಕ್ಕುಂ ಸಾಗುವಳಿದಾರರ ಸಭೆಯಲ್ಲಿ ಚನ್ನಗಿರಿ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ ಸೂಚನೆ ಮೇರೆಗೆ ಇಂದು ಚನ್ನಗಿರಿ ತಾಲೂಕ ದಂಡಾಧಿಕಾರಿಗಳಾದ ಪಟ್ಟ ರಾಜಗೌಡ ಬಗರ್ ಹುಕ್ಕುಂ ಸಾಗುವಳಿದಾರರ ಜಮೀನುಗಳನ್ನು ಪರಿಶೀಲನೆ ನಡೆಸಿದರು ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ಕುಬೇರಪ್ಪ, ಕಂದಾಯ ಇಲಾಖೆಯ ವೇದಮೂರ್ತಿ ಬಗರ್ ಹುಕ್ಕುಂ ಸಂಘದ ತಿಪ್ಪೇಶಪ್ಪ ರೈತ ಮುಖಂಡರ ರವಿಕುಮಾರ್ ಯಲೋಧಹಳ್ಳಿ ನಾಗರಾಜ್ ಗಂಗಾಧರ ನಾಯಕ್ ಪರಮೇಶ್ವರ್ ಮಂಜುನಾಥ್ ಶಿವನಾಯಕ್, ಪರಮೇಶ್ವರ ನಾಯಕ್ ಸ್ಥಳೀಯ ಗ್ರಾಮದ ಮುಖಂಡರು ಹಾಜರಿದ್ದರು.
