ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಿಂದ ಕಾಮಗಾರಿಗಳ ವೀಕ್ಷಣೆ
ದಾವಣಗೆರೆ: ದಾವಣಗೆರೆ ನಗರದ ನೂತನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ದೇವರಮನೆ ಶಿವಕುಮಾರ್ ಅವರು ಜೆಎಚ್ ಪಟೇಲ್ ಬಡಾವಣೆಯಲ್ಲಿ ವಿವಿಧ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.
ಹಾಗೂ ಬಡಾವಣೆಯಲ್ಲಿ ನಡೆಯುತ್ತಿರುವ ಪ್ರಸ್ಥ ಡಾಂಬರೀಕರಣದ ಕಾಮಗಾರಿಗಳನ್ನು ವೀಕ್ಷಿಸಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಸದಸ್ಯರಾದ ಗೌರಮ್ಮ ಪಾಟೀಲ್ ಮಾರುತಿರಾವ್ ಘಾಟ್ಕೆ, ಆರ್ ಲಕ್ಷ್ಮಣ್ ಪ್ರಾಧಿಕಾರದ ಆಯುಕ್ತರಾದ ಬಿ.ಟಿ.ಕುಮಾರಸ್ವಾಮಿ,ಅಭಿಯಂತರರಾದ ಶ್ರೀಕರ್, ಸೃಜನ್ ಅಕ್ಷತಾ ಇನ್ನಿತರರು ಇದ್ದರು