🙏ಎಲ್ಲರಿಗೂ ಉಪಯುಕ್ತ ಮಾಹಿತಿ🙏 ಕೊವಿಡ್ ನಿರೋಧಕ ಲಸಿಕೆ ಪಡೆಯಲು ಹೆಸರು ನೊಂದಣಿ ಕಡ್ಡಾಯ.ಇಲ್ಲಿದೆ ಸೂಕ್ತ ಮಾಹಿತಿ. ನೀವೂ ನೊಂದಣಿ ಮಾಡಿಕೊಳ್ಳಿ.ಇದನ್ನು ಶೇರ್ ಮಾಡಿ.ಕೊರೋನಾ ವಿರುದ್ದ ಗೆಲ್ಲೋಣ.

By: HMP KUMAR 9740365719
ದಾವಣಗೆರೆ : ಮೇ 1 ಒಂದರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಸೋಂಕು ತಡೆ ಲಸಿಕೆ ಸಿಗಲಿದೆ. ಆದರೆ ಆನ್ಲೈನ್ ಮೂಲಕ ಹೆಸರು ನೋಂದಾಯಿಸುವವರಿಗೆ ಮಾತ್ರ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಇದೆ.
ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಹಾಕುವ ಅಭಿಯಾನವನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತಿದರ. ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡಲಾಗಿತ್ತು. ಏಪ್ರಿಲ್ 1ರಿಂದ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಇದೀಗ ಮೂರನೇ ಹಂತದಲ್ಲಿ, ಮೇ 1ರಿಂದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಲಸಿಕೆ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ. ಈ ಮೂರನೇ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳುವವರು ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.
ಹೆಸರು ನೊಂದಾಯಿಸಿಕೊಂಡಲ್ಲಿ ಲಸಿಕೆ ಪಡೆಯುವ ದಿನಾಂಕ ಮತ್ತು ಸ್ಥಳ ನಿಗಧಿ ಮಾಡಿಕೊಳ್ಳಬಹುದು. ಕೋವಿನ್ ವೆಬ್ಸೈಟ್ ಮತ್ತು ಆರೋಗ್ಯ ಸೇತು ಆ್ಯಪ್ ಮೂಲಕ ಬುಧವಾರ ಸಂಜೆ ನಾಲ್ಕು ಗಂಟೆಯಿಂದ ಹೆಸರು ನೊಂದಣಿ ಮಾಡಿಕೊಳ್ಳಬಹುದಾಗಿದೆ. ಖಾಸಗಿ ಕೇಂದ್ರದಲ್ಲಿ ಲಸಿಕೆ ಪಡೆಯುವುದಕ್ಕೂ ಹೆಸರು ನೋಂದಣಿ ಕಡ್ಡಾಯವಾಗಿದೆ.
ಹೆಸರು ನೋಂದಣಿ ಹೇಗೆ..?
ಲಸಿಕೆ ಪಡೆಯುವವರು ಹೆಸರು ನೋಂದಾಯಿಸಲು https://www.cowin.gov.in/home ವೆಬ್ಸೈಟ್ಗೆ ಹೋಗಿ ಅಗತ್ಯ ವಿವರಗಳನ್ನು ಒದಗಿಸಬೇಕು.

ವೆಬ್ಸೈಟ್ನ ಬಲಭಾಗದಲ್ಲಿ ಮೇಲೆ ಸೈನ್ ಇನ್ ಯುವರ್ಸೆಲ್ಫ್ ಎಂಬುದನ್ನು ಕ್ಲಿಕ್ ಮಾಡಬೇಕು.ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು.
ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಆ ಒಟಿಪಿ ಸಂಖ್ಯೆಯನ್ನು ನಮೂದಿಸಿದ ಕೂಡಲೇ ಹೊಸ ಪೇಜ್ ತೆರೆಯಲ್ಪಡುತ್ತದೆ.
ಅದರಲ್ಲಿ ಹೆಸರು, ವಯಸ್ಸು, ಪ್ರದೇಶ, ವಿಳಾಸ, ಪಿನ್ ಕೋಡ್ ಸಹಿತ ಅಗತ್ಯ ವಿವರ ನಮೂದಿಸಬೇಕು.
ಆಗ ಆಸ್ಪತ್ರೆಗಳ ಲಿಸ್ಟ್ ಕಾಣಿಸಿಕೊಳ್ಳುತ್ತದೆ. ನಿಮಗೆ ಸೂಕ್ತವೆನಿಸುವ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
ಈ ಬಗ್ಗೆ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರಲಿದ್ದು, ಅದರಂತೆ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆಯಬಹುದು.