Fair price Shop Ragi: ಪಡಿತರ ರಾಗಿಯಲ್ಲಿ ಅಕ್ರಮದ ವಾಸನೆ.! ಕುರುಡರಾದ ಇಲಾಖಾ ಸೈನ್ಯ.! ಡಿಸಿ ಮಾತಿಗೆ ಕಿಮ್ಮತ್ತಿಲ್ವಾ.?

Exclusive Part – 1
ದಾವಣಗೆರೆ: ಸರ್ಕಾರ ಬಡವರ ಹೊಟ್ಟ ತುಂಬಿಸಲು ಅಂತ್ಯೊದಯ ಹಾಗೂ ಬಿ ಪಿ ಎಲ್ ಕಾರ್ಡ್ ನೀಡಿ ಅದರ ಮೂಲಕ ( ಸೊಸೈಟಿ ) ನ್ಯಾಯಬೆಲೆ ಅಂಗಡಿಯಲ್ಲಿ ಉಚಿತವಾಗಿ ಆಹಾರ ಧಾನ್ಯ ನೀಡುವ ಪದ್ದತಿ ಜಾರಿಗೆ ತಂದಿದೆ. ಇದರಿಂದ ಎಷ್ಟೋ ಜನರಿಗೆ ಅನೇಕ ರೀತಿಯ ಅನುಕೂಲವಾಗಿದೆ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ನ್ಯಾಯಬೆಲೆ ( ಸೊಸೈಟಿ) ಅಂಗಡಿಯವರು ಧೈರ್ಯವಾಗಿ ಯಾರ ಭಯವಿಲ್ಲದೆ ಅಕ್ರಮದ ಹಾದಿ ಹಿಡಿದಿದ್ದಾರೆ, ಅಲ್ಲದೇ ಇವರಿಗೆ ಸಂಬಂಧಿಸಿದ ಕೆಲ ಅಧಿಕಾರಿಗಳ ಕೃಪೆಯಿಂದ ಅಕ್ರಮ ನಡೆಸಲು ಪ್ರೇರಣೆ ಇರಬಹುದೇನೋ ಎಂಬ ಸಂಶಯ ಕಾಡುವುದು ಸತ್ಯ.!
ಅನ್ನಭಾಗ್ಯ ಜೊತೆ ರಾಗಿ ಭಾಗ್ಯ ನೀಡಲು ಅಕ್ಕಿಯ ಜೊತೆ ರಾಗಿ ನೀಡುವ ಯೋಜನೆ ಸರ್ಕಾರ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಅಯಾ ಜಿಲ್ಲೆಗಳ ಬೇಡಿಕೆಗೆ ತಕ್ಕಂತೆ ರೂತರಿಂದ ಹೆಚ್ಚಾಗಿ ಬೆಂಬಲ ಬೆಲೆ ನೀಡಿ ರಾಗಿ ಖರೀದಿಸಲಾಗಿದೆ. ಇದೇ ರಾಗಿಯನ್ನ ಸಾರ್ವಜನಿಕರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ನೀಡುತ್ತಿದೆ.
ಡಿಸಿ ಮಹಾಂತೇಶ್ ಬೀಳಗಿ ರಾಗಿ ವರ್ತಕರಿಗೆ ನೀಡಿದ್ದ ಎಚ್ಚರಿಕೆ ಕೇವಲ ಮಾತಿಗೆ ಸಿಮೀತವಾಯ್ತ.!
ಇತ್ತೀಚೆಗೆ ದಾವಣಗೆರೆ ಜಿಲ್ಲೆಗೆ ನೂತನ ಎಸ್ ಪಿ ಬಂದ ನಂತರ ಅವರ ಖಡಕ್ ಅದ ಕಾನೂನಿನ ಕುಣಿಕೆಗೆ ಬಿದ್ದು ಅಕ್ರಮವಾಗಿ ಅನ್ನ ಭಾಗ್ಯ ಯೋಜನೆಯ ಅಕ್ಕಿ ಮಾರಾಟ ಹಾಗೂ ಸಾಗಾಟ ಮಾಡುತ್ತಿರುವ ವ್ಯಕ್ತಿಗಳಿಗೆ ಮೂಗು ದಾರ ಹಾಕಿದ್ದರು. ಆದ್ರೆ ಇದೀಗ ಕೆಲ ಅಕ್ಕಿ ಮಾಫಿಯಾದವರು ಕೆಲ ಅಧಿಕಾರಿಗಳ ಜೊತೆ ಸೇರಿಕೊಂಡು ಪಡಿತರ ವ್ಯವಸ್ಥೆಯಲ್ಲಿ ನೀಡುವ ರಾಗಿಯನ್ನು ಅಕ್ರಮವಾಗಿ ನಿಯಮ ಬಾಹಿರವಾಗಿ ನ್ಯಾಯಬೆಲೆ ಅಂಗಡಿಯಿಂದ ದುರುಳರ ಮೂಲಕ ಕಾಳು ಖರೀದಿ ವರ್ತಕರ ಅಂಗಡಿಗಳಿಗೆ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದರು. ಇದರಿಂದ ಪೊಲೀಸ್ ಅಧಿಕಾರಿಗಳು ತಡೆಯಬಹುದ ಎಂದು ಡಿಸಿ ಬಳಿ ರಾಗಿ ಖರೀದಿಸಲು ಅವಕಾಶ ಕೇಳಲು ಹೋದಾಗ ಡಿಸಿ ಬೈದು ಕಳಿಸಿದ್ದರು. ರಾಗಿ ನೀಡುವವರು ಹಾಗೂ ಖರೀದಿ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತೆನೆ ಎಂದು ಬೈದು ಕಳಿಸಿದ್ದರು. ಅದ್ರೆ ಒಂದೆರೆಡು ದಿನ ಸುಮ್ಮನಿದ್ದ ವರ್ತಕರು ಭಾರಿ ಪ್ರಮಾಣದಲ್ಲಿ ರಾಗಿಯನ್ನ ಖರೀದಿ ಮಾಡುತ್ತಿರುವ ದೃಶ್ಯಗಳು ಗರುಡವಾಯ್ಸ್ ತಂಡದ ತನಿಖೆಯ ಸಂದರ್ಭದಲ್ಲಿ ಭಯಲಾಗಿದೆ.
ಎಸ್ ಪಿ ರಿಷ್ಯಂತ್ ಭಯಕ್ಕೆ ಅಕ್ಕಿ ಕನ್ನಕ್ಕೆ ಬ್ರೇಕ್.! ಜೋರಾಗಿದೆ ರಾಗಿ ಖರೀದಿ
ದಾವಣಗೆರೆ ಜಿಲ್ಲೆಗೆ ನೂತನ ಎಸ್ ಪಿ ರಿಷ್ಯಂತ್ ಅಧಿಕಾರವಹಿಸಿಕೊಂಡ ನಂತರ ಪ್ರಮುಖವಾಗಿ ಅಕ್ಕಿ ಮಾಫಿಯಾಕ್ಕೆ ಕಡಿವಾಣ ಹಾಕಿದ್ದಾರೆ, ಇವರ ಭಯದಿಂದ ಅನ್ನಭಾಗ್ಯ ಯೋಜನೆಯ ಅಕ್ಕಿ ಖರೀದಿ,ಮಾರಾಟ,ಹಾಗೂ ಸಾಗಾಟ ಮಾಡುತ್ತಿದ್ದವರು ಇದೀಗ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಇದನ್ನ ನೋಡಿದ್ರೆ ಸರ್ಕಾರಕ್ಕೆ ಸೆಡ್ಡು ಹೊಡೆದು ಅಕ್ರಮ ಮಾಡೇ ಮಾಡ್ತೀವಿ ನಮ್ಮನ್ನ ಹೇಗೆ ತಡಿತೀರಾ ನೋಡ್ತೀವಿ ಎನ್ನುವ ಹಾಗೆ ಪಡಿತರ ವ್ಯವಸ್ಥೆಯಲ್ಲಿ ನೀಡುವ ರಾಗಿ ಖರೀದಿ ಎಗ್ಗಿಲ್ಲದೆ ನಡೀತಿದೆ.
ಸೊಸೈಟಿಯಿಂದ ನೀಡುವ ರಾಗಿಯ ಗುಣಮಟ್ಟ ಸರಿ ಇಲ್ಲ. ಇದರ ಬಗ್ಗೆ ಅಧಿಕಾರಿಗಳು ಜಾಣ ಮೌನವಹಿಸಿದ್ದಾರೆ. ರಾಗಿಯಲ್ಲಿ ಮಣ್ಣು ಮಿಶ್ರಿತ ಇರುವುದರಿಂದಾಗಿ ಸಾರ್ವಜನಿಕರು ರಾಗಿಯನ್ನ ತಿರಸ್ಕಾರ ಮಾಡಿದ್ದಾರೆ ಹಾಗೂ ಮಣ್ಣು ಮಿಶ್ರಿತ ರಾಗಿ ಬೇಡ ಎಂದು ಸೊಸೈಟಿಯಿಂದ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಸೊಸೈಟಿಯಲ್ಲಿ ಉಳಿಯುವ ರಾಗಿಗೆ ಕಾಳಸಂತೆಯಲ್ಲಿ ರಾಗಿಗೆ ಭಾರಿ ಬೇಡಿಕೆ ಬಂದಿದೆ.
ನ್ಯಾಯಬೆಲೆ ಅಂಗಡಿಯಲ್ಲಿ ಚೀಲದಿಂದ ಚೀಲಕ್ಕೆ ರಾಗಿ ಪಲ್ಟಿ
ಸೊಸೈಟಿಯಲ್ಲಿ ಇರುವ ರಾಗಿ ಚೀಲದಿಂದ ಬೆರೇ ಚಿಲಕ್ಜೆ ರಾಗಿಯನ್ನ ಪಲ್ಟಿ ಮಾಡಿ, ಸ್ಕೂಟರ್ ಅಥವಾ ಪ್ಯಾಸೆಂಜರ್ ಆಟೋಗಳಲ್ಲಿ ನೇರವಾಗಿ ಮಾರುಕಟ್ಟೆಯಲ್ಲಿ ಇರುವ ಚಿಲ್ಲರೆ ಕಾಳು ಖರೀದಿ ವ್ಯಾಪಾರಿಗಳಿಗೆ ಹಣಕ್ಕೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಸೊಸೈಟಿಯಲ್ಲಿ ಜನರು ರಾಗಿ ಬೇಡ ಎನ್ನುವವರಿಗೆ ಸೊಸೈಟಿ ಮಾಲೀಕರು ಹಾಗೂ ನ್ಯಾಯಬೆಲೆ ಅಂಗಡಿಗಳ ಸಮೀಪ ಖರೀದಿದಾರರು ಜನರಿಂದ ಕೆಜಿಗೆ 8-12 ರುಪಾಯಿ ಅಂತಾ ಹಣ ನೀಡ್ತಾರೆ. ಖರೀದಿ ಮಾಡಿದ ರಾಗಿಯನ್ನ ವರ್ತಕರು 12-16 ರೂಪಾಯಿಯವರೆಗೆ ಹಣವನ್ನ ನೀಡ್ತಾರೆ. ವರ್ತಕರು ಟನ್ ಗಟ್ಟಲೆ ಖರೀದಿಸಿದ್ದ ರಾಗಿಯನ್ನ ರಾಜ್ಯದ ಯಾವ ಜಿಲ್ಲೆಯಲ್ಲಿ ರಾಗಿ ಹೆಚ್ಚು ಬೇಡಿಕೆ ಇರುತ್ತೊ ಅಲ್ಲಿಗೇ ಅಥವಾ ರಾಜ್ಯದ ತಮಿಳುನಾಡು ಹಾಗೂ ಆಂಧ್ರಪ್ರದೇಶದ ವರ್ತಕರಿಗೆ ಮಾರಾಟ ಮಾಡುತ್ತಿದ್ದಾರೆ. ಇದು ಕೂಡ ಅನ್ನಬಾಗ್ಯ ಯೋಜನೆಯ ಅಕ್ಕಿ ಮಾಫಿಯಾ ರಿತೀಯಲ್ಲಿ ಕೆಲಸ ಮಾಡುತ್ತಿದೆ.
ಸರ್ಕಾರ ಉಚಿತವಾಗಿ ನೀಡುವ ರಾಗಿಯನ್ನ ಹಣಕ್ಕೆ ರಾಜಾ ರೋಷವಾಗಿ ಮಾರಾಟ ಮಾಡಿಕೊಳ್ಳುತ್ತಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಗೊತ್ತಿದ್ದರು, ಜಾಣ ಕುರುಡುತನ ಪ್ರದರ್ಶನ ಮಾಡುತ್ತಿರುವುದು ನೋಡಿದ್ರೆ ಎಲ್ಲರೂ ವ್ಯವಸ್ಥೆಯಡಿ ಪಾಲುದಾರಿಕೆಯನ್ನು ಹೊಂದಿರುವ ಬಗ್ಗೆ ಅನುಮಾನ ಮೂಡುವುದಂತು ಸಹಜ. ಸರ್ಕಾರ ಹೆಚ್ಚಿನ ಬೆಲೆಗೆ ಧಾನ್ಯವನ್ನು ಖರೀದಿಸಿ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಉಚಿತವಾಗಿ ನೀಡಿದ್ರೆ ಕೆಲ ಸಾರ್ವಜನಿಕರು ಸೇರಿದಂತೆ ಹಣಕ್ಕೆ ಪಡಿತರ ದಾನ್ಯವನ್ನ ಅಕ್ರಮವಾಗಿ ಮಾರಾಟ ಮಾಡಿಕೊಂಡು ತಮ್ಮ ಜೇಬನ್ನ ತುಂಬಿಸಿಕೊಳ್ಳುತ್ತಿದ್ದಾರೆ.
ಒಟ್ಟಾರೆ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯುವ ಅಕ್ರಮವನ್ನ ಸರ್ಕಾರ ಉನ್ನತ ತನಿಖೆಗೆ ಒಳಪಡಿಸಿ ಸರ್ಕಾರಕ್ಕೆ ಆಗುವ ನಷ್ಟವನ್ನ ತಡೆಯಲು ಸಾಧ್ಯ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ನ್ಯಾಯಬೆಲೆ ಅಂಗಡಿಯ ಹಾಗೂ ಖರೀದಿಸುವ ವರ್ತಕರ ವಿವರಗಳೊಂದಿಗೆ ಭಾಗ – 2 Exclusive ವರದಿ