Smart City Curruption: ಸ್ಮಾರ್ಟ್ ಸಿಟಿಯಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ – ಯುವ ಭಾರತ್ ಗ್ರೀನ್ ಬ್ರಿಗೇಡ್

IMG-20210921-WA0005

 

ದಾವಣಗೆರೆ: ನಗರ ಪಾಲಿಕೆ ವ್ಯಾಪ್ತಿಯ 98 ಕಡೆ ಅಳವಡಿಕೆಯಾಗಿರುವ ಸಿಸಿ ಕ್ಯಾಮೆರಾ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಜತೆಗೆ ಅವುಗಳು ಇಂದಿನ ಕಾಲಕ್ಕೆ ಯೋಗ್ಯವಾಗಿಲ್ಲ. ಸ್ಮಾರ್ಟ್ ಸಿಟಿಯಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಯುವ ಭಾರತ್ ಗ್ರೀನ್ ಬ್ರಿಗೇಡ್ ಆರೋಪಿಸಿದೆ.

ಪಾಲಿಕೆ ವ್ಯಾಪ್ತಿಯ 112 ಸ್ಥಳಗಳಲ್ಲಿ 220 ಸಿಸಿ ಕ್ಯಾಮೆರಾ ಅಳವಡಿಕೆಗೆ ಸರ್ಕಾರ ಕಾರ್ಯಾದೇ± ಮಾಡಿದ್ದು,  ಅದರಲ್ಲಿ 98 ಕಡೆಗಳಲ್ಲಿ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಇವುಗಳು ಕೇವಲ ಒಂದೇ ದಿನದ ದತ್ತಾಂಶವು ಹೊಂದಿದ್ದು, ನಗರದಲ್ಲಿ ನಡೆಯುವ ಅಪಘಾತ, ಸರಗಳ್ಳತನ ಸೇರಿ ಹಲವು ಅಪರಾಧ ಪ್ರಕರಣಗಳ ತನಿಖೆ ನಡೆಸಲು ಸಾಕ್ಷö್ಯ ಸಿಗುತ್ತಿಲ್ಲ ಎಂದು ಹಿಂದಿನ ಎಸ್ಪಿ ಹನುಮಂತರಾಯ ಅವರು ಸ್ಮಾರ್ಟ್ಸಿಟಿ ವ್ಯವಸ್ಥಾಪಕರಿಗೆ ಮನವಿ ಮಾಡಿದ್ದರು ಎಂದು ಗ್ರೀನ್ ಬ್ರಿಗೇಡ್‌ನ ಅಧ್ಯಕ್ಷ ನಾಗರಾಜ್ ಸುರ್ವೆ ಮತ್ತು ಕಾರ್ಯದರ್ಶಿ ಪ್ರಭುಲಿಂಗಪ್ಪ ಹೇಳಿದರು.

ಸ್ಮಾರ್ಟ್ ಸಿಟಿ ಕಾಮಗಾರಿಗಳು ಎರಡ್ಮೂರು ವರ್ಷಗಳಾದರೂ ಮುಗಿಯುತ್ತಿಲ್ಲ, ಬಹುತೇಕ ಎಲ್ಲಾ ಕಾಮಗಾರಿಗಳಲ್ಲೂ ಹೆಚ್ಚುವರಿ ದರಗಳನ್ನು ನಿಗದಿಪಡಿಸಿ, ಬಿಲ್ಲು ಪಾವತಿಸಲಾಗಿದೆ. ಎಲ್ಲಾ ಕಾಮಗಾರಿಗಳು ಕಳಪೆ ಗುಣಪಟ್ಟದಿಂದ ಕೂಡಿದ್ದು, ಸಕ್ಷಮ ಪ್ರಾಧಿಕಾರದಿಂದ ಇವುಗಳ ಗುಣಮಟ್ಟ ಕುರಿತು ಪ್ರಮಾಣ ಪತ್ರಗಳನ್ನು ಪಡೆದಿಲ್ಲ. ಅನಾವಶ್ಯಕ ಸ್ಥಳಗಳಲ್ಲಿ ಈ-ಟಾಯ್ಲೆಟ್ವಚನ ನಿರ್ಮಾಣ ಮಾಡಿರುವುದು ಸೇರಿದಂತೆ ಒಟ್ಟಾರೆ ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆಪಾದಿಸಿದರು.

ಸ್ಮಾರ್ಟ್ಸಿಟಿ ಯೋಜನೆಯಡಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ ನೂರಾರು ಕೋಟಿ ರೂ., ಭ್ರಷ್ಟಾಚಾರ ನಡೆದಿದ್ದು, ಸ್ಮಾರ್ಟ್ಸಿಟಿ ವ್ಯವಸ್ಥಾಪಕರಿಗೆ ಯಾವುದೇ ಬಡ್ತಿ ನೀಡದೆ, ವರ್ಗಾವಣೆಗೂ ಅವಕಾಶ ನೀಡದೆ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಜುನಾಥ್ ನೆಲ್ಲಿ, ವಿಕಾಸ್ ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!