Corporation:ಮಹಾನಗರ ಪಾಲಿಕೆ ಕಚೇರಿಯ ವಿವಿಧ ವಿಭಾಗಗಳಿಗೆ ಮೇಯರ್ ಭೇಟಿ: ಅಧಿಕಾರಿಗಳಿಗೆ ಮೈ ಚಳಿ ಬಿಡಿಸಿದ ಎಸ್ ಟಿ ವಿರೇಶ್

ದಾವಣಗೆರೆ: ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಕಚೇರಿಗಳಿಗೆ ದಿಢೀರ್ ಭೇಟಿ ಕೊಟ್ಟ ಮೇಯರ್ ಎಸ್.ಟಿ. ವೀರೇಶ್ ಖಾತೆ ಬದಲಾವಣೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಖಾತಾ ಬದಲಾವಣೆ ಮಾಡಿ ಕೊಡುವುದರಲ್ಲಿ ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ವಿಳಂಬಲಬ ಮಾಡುವುದನ್ನು ಗಮನಿಸಿದ ಮೇಯರ್ ಅಧಿಕಾರಿಗಳಿಗೆ ಚಾಟಿ ಬೀಸಿದರು.
ಜನರು ಪಾಲಿಕೆಗೆ ಪದೇ ಪದೇ ಅಲೆಯುವುದು ಬೇಡ, ತಕ್ಷಣ ಅವರಿಗೆ ಸ್ಪಂದಿಸಿ ಕೆಲಸ ಮಾಡಿಕೊಡುವ ಮೂಲಕ ಅವರು ಪಾಲಿಕೆಗೆ ಅಲೆಯುವುದನ್ನು ತಪ್ಪಿಸಿ ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಆಯುಕ್ತ ವಿಶ್ವನಾಥ ಮುದಜ್ಜಿ ಹಾಗೂ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.