Railway Gate Traffic: ರಸ್ತೆ ಕಾಮಗಾರಿ ಹಾಗೂ ಚರಂಡಿ ದುರಸ್ತಿ: ಅಶೋಕ ಚಿತ್ರಮಂದಿರ ರೈಲ್ವೆ ಗೇಟ್ ಬಳಿ ಟ್ರಾಫಿಕ್ ಜಾಮ್

IMG-20210923-WA0045

ದಾವಣಗೆರೆ: ದಾವಣಗೆರೆ ನಗರದ ಹಳೆ ದಾವಣಗೆರೆಗೆ ಸಂಪರ್ಕ ಕಲ್ಪಿಸುವ ಏಕೈಕ ಬಾಗಿಲು ಎಂದರೆ ಪೂನಾ- ಬೆಂಗಳೂರು ರಸ್ತೆಯಿಂದ ಅಶೋಕ ಚಿತ್ರಮಂದಿರದವರೆಗೆ ಸಂಪರ್ಕಿಸುವ ರೈಲ್ವೆ ಹಳಿ ಬಳಿ ಇರುವ ಗೇಟ್.
ಇಂದು 20 ನಿಮಿಷಗಳವರೆಗೆ ಗೇಟ್ ಹಾಕಿ ಹೊಸ ದಾವಣಗೆರೆಗೆ ಹಾಗೂ ಹಳೆ ದಾವಣಗೆರೆಗೆ ಸಂಚರಿಸುವ ವಾಹನಗಳಿಗೆ ಪೀಕಲಾಟ ಪರಿಸ್ಥಿತಿ ಉಂಟಾಗಿತ್ತು.


ಪಿಬಿ ರಸ್ತೆ ಬಳಿ ಡ್ರೈನೇಜ್ ದುರಸ್ತಿ ಹಾಗೂ ರೈಲ್ವೆಗೇಟ್ ಬಳಿ ಇರುವ ಲಿಂಗೇಶ್ವರ ದೇವಸ್ಥಾನದ ಬಳಿ ದುರಸ್ತಿ ಕಾರಣ ವಾಹನದಟ್ಟಣೆ ತಡೆಯಲು 20 ನಿಮಿಷಗಳ ರೈಲ್ವೆ ಗೇಟ್ ಅನ್ನು ಹಾಕಿದ ಸಂದರ್ಭದಲ್ಲಿ ಇಂದು ಮಧ್ಯಾಹ್ನ ಸ್ವಲ್ಪ ಸಮಯದ ವಾಹನದಲ್ಲಿ ಸಂಚರಿಸಿದವರೂ.
ಹಳೆ ದಾವಣಗೆರೆಗೆ ಆಗಮಿಸಲು ಅಥವಾ ಹೊರಹೋಗಲು ಈರುಳ್ಳಿ ಮಾರುಕಟ್ಟೆ ಬಳಿಯಿರುವ ಕೆಳ ಸೇತುವೆ ಮುಖಾಂತರ ಅಥವಾ ವಸಂತ ಚಿತ್ರಮಂದಿರ ಬಳಿಯಿರುವ ಹಳೆ ಅಂಡರ್ಪಾಸ್ ಮುಖಾಂತರ ಸಂಚರಿಸಲು ಹರಸಾಹಸಪಡಬೇಕಾಯಿತು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!