Sp Balasubramanyam: ಸೆಪ್ಟೆಂಬರ್ 25ಕ್ಕೆ ಸ್ವರ ಸಾಮ್ರಾಟ್ ‘ಎಸ್ ಪಿ ಬಾಲಸುಬ್ರಮಣ್ಯಂ’ ಪುಸ್ತಕ ಲೋಕಾರ್ಪಣೆ

IMG-20210923-WA0007

 

ದಾವಣಗೆರೆ: ಸಿನಿಮಾ ಹಿನ್ನೆಲೆ ಗಾನ ರಂಗದಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಜನರಿಗೆ ಹತ್ತಿರವಾದ ಗಾಯಕ ಎಂದು ಹೆಸರಾಗಿದ್ದಾರೆ. ಸುಮಾರು 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ದಾಖಲೆಗೆ ದಾಖಲಿಸಿರುವ ಜಗತ್ತಿನ ಅಗ್ರಮಾನ್ಯ ಗಾಯಕ ಎಸ್ಪಿ ಬಾಲಸುಬ್ರಮಣ್ಯಂ ಎಂಬುದು ಕೂಡ ಗಮನಾರ್ಹ.

ಇಂತಹ ವೈಶಿಷ್ಟಪೂರ್ಣ ಸಾಧನೆಯ ವ್ಯಕ್ತಿಯ ಬಗ್ಗೆ ಕನ್ನಡದಲ್ಲಿ ಜೀವನಕಥನ ಪಠಿಸುವ ಅವಶ್ಯಕತೆ ಕಂಡಿತ ಇದೆ ಈ ಸದುದ್ದೇಶದಿಂದ ಕಾರಣಕ್ಕಾಗಿ ಪತ್ರಕರ್ತ ವಿ ಹನುಮಂತಪ್ಪ ಬರೆದಿರುವ ಸ್ವರ ಸಾಮ್ರಾಟ್ “ಎಸ್ ಪಿ ಬಾಲಸುಬ್ರಹ್ಮಣ್ಯಂ” ಪುಸ್ತಕ ಲೋಕಾರ್ಪಣೆ ಇದೇ ದಿನಾಂಕ 25 ರಂದು ನಡೆಯಲಿದೆ ಎಂದು ಜಿಲ್ಲಾ ಸಮಾಚಾರ ಪತ್ರಿಕೆ ಬಳಗದ ಸಾಲಿಗ್ರಾಮ ಗಣೇಶನ ತಿಳಿಸಿದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು.
ವಿದ್ಯಾನಗರದಲ್ಲಿರುವ ಕುವೆಂಪು ಕನ್ನಡ ಭವನದಲ್ಲಿ
ಸಂಜೆ ಐದು ಮೂವತ್ತಕ್ಕೆ ಸಮಾರಂಭ ಏರ್ಪಡಿಸಲಾಗಿದೆ ಸಪ್ಟಂಬರ್ 25ಕ್ಕೆ ಎಸ್ಪಿಬಿ ಅವರು ನಮ್ಮನ್ನಗಲಿ ಸರಿಯಾಗಿ ಒಂದು ವರ್ಷ ವಾಗುತ್ತಿರುವ ಸಂದರ್ಭದ ಸ್ಮರಣೆಯಲ್ಲಿ ಈ ಕೃತಿ ಲೋಕಾರ್ಪಣೆ ನಡೆಯುತ್ತಿರುವುದು ವಿಶೇಷವಾಗಿದೆ ಈ ಕಾರ್ಯಕ್ರಮವನ್ನು ಮಹಾಪೌರರಾದ ಎಸ್ ಟಿ ವೀರೇಶ್ ಉದ್ಘಾಟನೆ ಮಾಡಲಿದ್ದಾರೆ ಖ್ಯಾತ ರಂಗಭೂಮಿ ನಟ ನಿರ್ದೇಶಕರಾದ ಚಿಂದೋಡಿ ಬಂಗಾರೇಶ್ ಪುಸ್ತಕ ಲೋಕಾರ್ಪಣೆ ನೆರವೇರಿಸುವರು
ಮುಖ್ಯ ಅತಿಥಿಗಳಿಗೆ ಹಿರಿಯ ನ್ಯಾಯವಾದಿ ಶ್ರೀರಾಮಚಂದ್ರ ಕಲಾಲ್, ಡಾಕ್ಟರ್ ಸುರೇಶ್ ಅನಗವಾಡಿ ಹಾಗೂ ಡಾಕ್ಟರ್ ಜಿ ಎಸ್ ಹೆಚ್ ಕುಮಾರ್ ಉಪಸ್ಥಿತಾರಿರುವರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳಾದ ಶರಣಪ್ಪ ಹಲಸೆ ವಹಿಸುವರು
ಪತ್ರಿಕಾ ಬಳಗದವರು ಅಧ್ಯಕ್ಷ ಏನ್ ಟಿ ಏರಿಸ್ವಾಮಿ ಮತ್ತು ಕೃತಿಯ ಲೇಖಕರಾದ ಹನುಮಂತಪ್ಪ ಉಪಸ್ಥಿತರಿರುವರು
ಈ ಸಂದರ್ಭದಲ್ಲಿ ಎಸ್ಪಿಬಿ ಹಾಡಿರುವ ಗೀತೆಗಳು ಗಾಯನ ಮತ್ತು ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪಾಪು ಗುರು ಶ್ರೀಕುಮಾರ್ ಆನೆಕೊಂಡ ಆನಂದತೀರ್ಥಾಚಾರ್ ಭಾರತಿ ಇದ್ದರು

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!