Congress dc Gate: ಡಿಸಿ ಕಚೇರಿಯ ಗೇಟ್ ಮುರಿದು ಒಳಹೋಗಲು ಯತ್ನಿಸಿದ ಕಾಂಗ್ರೇಸ್ ಕಾರ್ಯಕರ್ತರು

ದಾವಣಗೆರೆ: ಪೊಲೀಸರು ಒಳಗೆ ಬಿಡದಿದ್ದಕ್ಕೆ ಜಿಲ್ಲಾಧಿಕಾರಿ ಕಚೇರಿ ಗೇಟನ್ನು ಮುರಿದು ಒಳನುಗ್ಗಲು ಯತ್ನಿಸಿರುವ ಘಟನೆ ದಾವಣಗೆರೆ ಜಿಲ್ಲಾಧಿಕಾರಿಕಚೇರಿ ಮುಂಭಾಗದಲ್ಲಿ ನಡೆದಿದೆ.
ಇಂಧನ ಬೆಲೆ ಏರಿಕೆ ಹಾಗೂ ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಇಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಹಾಗೂ ಕಿಸಾನ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಗೇಟ್ ಬಳಿ ಜಮಾಯಿಸಿದ ಕಾರ್ಯಕರ್ತರು.ಪ್ರತಿಭಟನಾಕಾರರು ಒಳಹೋಗದಂತೆ ಪೊಲೀಸರು ಜಿಲ್ಲಾಧಿಕಾರಿ ಕಚೇರಿಯ ಬೀಗ ಜಡಿದು ಪ್ರತಿಭಟನಾಕಾರರು ಒಳ ಹೋಗದಂತೆ ತಡೆದರು.
ಸಿಟ್ಟಿಗೆದ್ದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಯ ಗೇಟನ್ನು ಮುರಿಯಲು ಯತ್ನಿಸಿ ಪೊಲೀಸ್ ರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ನಂತರ ಅಧಿಕಾರಿಗಳು ಗೇಟ್ ಬೀಗ ತೆಗೆದು ಪ್ರತಿಭಟನಾಕಾರರಿಗೆ ಮನವಿ ಕೊಡಲು ಅನುವು ಮಾಡಿಕೊಟ್ಟರು