ಶ್ರೀ ಸೋಮೇಶ್ವರ ವಿದ್ಯಾಸಂಸ್ಥೆ ವತಿಯಿಂದ ಪಾಲಿಕೆ ವ್ಯಾಪ್ತಿಯ, 33ನೇ ವಾರ್ಡ್ನ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

ದಾವಣಗೆರೆ: 2020-21ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಶೇ. 85 ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುವ ಪಾಲಿಕೆ ವ್ಯಾಪ್ತಿಯ 33ನೇ ವಾರ್ಡ್ನ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದು ಶ್ರೀ ಸೋಮೇಶ್ವರ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಎಂ.ಸುರೇಶ್ ತಿಳಿಸಿದ್ದಾರೆ.
ಶ್ರೀ ಸೋಮೇಶ್ವರ ವಿದ್ಯಾಲಯ ಮತ್ತು ಸರಸ್ವತಿ ನಗರ ಬಿ ಬ್ಲಾಕ್ನ ಶ್ರೀ ವಿಜಯ ವಿನಾಯಕ ಯುವಕ ನಾಗರಿಕ ವೇದಿಕೆ, ಸರಸ್ವತಿ ನಗರದ ನಾಗರಿಕ ಹಿತರಕ್ಷಣಾ ಸಮಿತಿಯ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅರ್ಹ ವಿದ್ಯಾರ್ಥಿಗಳು ತಮ್ಮ ಅಂಕ ಪಟ್ಟಿ, ವಾಸ ಸ್ಥಳ ದೃಡೀಕರಣಕ್ಕಾಗಿ ಆಧಾರ್ ಕಾರ್ಡ್, ತಮ್ಮ ಇತ್ತೀಚೆಗಿನ 2 ಪಾಸ್ ಪೋರ್ಟ್ ಅಳತೆಯ ಫೋಟೋಗಳನ್ನು ಅ. 20ರ ಒಳಗಾಗಿ ಸಲ್ಲಿಸಬೇಕು ಎಂದವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ 9686748362, ಕೆ.ಎಂ.ವೀರೇಶ್, ಮಹಾನಗರ ಪಾಲಿಕೆ ಸದಸ್ಯರು 9844466838, ಎಸ್.ಟಿ.ಸೋಮಶೇಖರ್ 9880337686, ಕೆ.ರಾಘವೇಂದ್ರ ನಾಯರಿ 9844314543, ಬಿ.ಎಮ್.ಗದಿಗೇಶ್ 9901916637, ಸಿದ್ದೇಶ್ 9844212344 ಇವರನ್ನು ಸಂಪರ್ಕಿಸಬಹುದು.
