Bear Attack: ಚನ್ನಗಿರಿಯ ಜೋಳದಾಳ್ ಗ್ರಾಮದ ಬಳಿ ರೈತನ ಮೇಲೆ ಕರಡಿ ದಾಳಿ

ದಾವಣಗೆರೆ: ಚನ್ನಗಿರಿ ತಾಲೂಕಿನಲ್ಲಿರುವ ಜೋಳದಾಳ್ ಗ್ರಾಮದ ಬಳಿ ಕರಡಿ ದಾಳಿಯಿಂದ ರೈತನಿಗೆ ಗಾಯವಾಗಿದೆ. ಮೆಕ್ಕೆಜೋಳ ಹೊಲದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದು ಕಾಡು ಹಂದಿಗಳ ಹಾವಳಿ ಹೆಚ್ಚಾಗಿರುವುದರಿಂದ ತನ್ನ ಬೆಳೆಯನ್ನು ಕಾಯಲು ಹೋದ ಹೊಲದ ಮಾಲೀಕ ಮಲ್ಲಪ್ಪನಿಗೆ ಮರಿ ಕರಡಿ ಒಂದು ದಾಳಿ ನಡೆಸಿದ್ದು ಹೊಲದ ಮಾಲೀಕನ ಭುಜ ಹಾಗೂ ಕೈಗಳಿಗೆ ಗಾಯಗಳಾಗಿದೆ.
ಗಾಯಾಳುವನ್ನು ಚನ್ನಗಿರಿಯ ಸರ್ಕಾರಿ ಆಸ್ಪತ್ರೆ ದಾಖಲು ಮಾಡಲಾಗಿದೆ
ಹಲವಾರು ಬಾರಿ ಕರಡಿ ದಾಳಿ ಮಾಡಿದ್ದು ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
