Private Bus Accident: 30 ಜನರಿದ್ದ ಬಸ್ ಪಲ್ಟಿ.! ಅದೃಷ್ಟವಶಾತ್ 10 ಜನರಿಗೆ ಸಣ್ಣಪುಟ್ಟ ಗಾಯ

ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಯಾಗಿರುವ ಘಟನೆ ನಡೆದಿದೆ.ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸೋಮಶೆಟ್ಟಿಹಳ್ಳಿ ಬಳಿ ಖಾಸಗಿ ಲಕ್ಷ್ಮಿ ಬಸ್ ದಾವಣಗೆರೆಯಿಂದ ನಲ್ಲೂರು ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುವಾಗ ಸೋಮಶೆಟ್ಟಿಹಳ್ಳಿ ಬಳಿ ಸ್ಟೇರಿಂಗ್ ರಾಡ್ ಕಟ್ಟಾಗಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ದುರ್ಘಟನೆ ನೆಡೆದಿದೆ.
ಈ ಬಸ್ನಲ್ಲಿ 30 ಜನ ಪ್ರಯಾಣಿಸುತ್ತಿದ್ದು 10 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದು ಯಾವುದೇ ರೀತಿಯ ಸಾವು ನೋವುಗಳು ಸಂಭವಿಸಿಲ್ಲ. ಸ್ಥಳೀಯರು ಗ್ರಾಮಸ್ಥರು ಆಗಮಿಸಿ ಜನರನ್ನು ರಕ್ಷಿಸಿದ್ದಾರೆ.
ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
