ಮುಂದಿನ ಭವಿಷ್ಯಕ್ಕಾಗಿ ಓದಬೇಕು ಓದಿದರೆ ಮಾತ್ರ ಭವಿಷ್ಯ – ಸಹಾಯಕ ಪ್ರಾಧ್ಯಾಪಕ ಫ್ರೋ. ವೆಂಕಟೇಶ್ ಬಾಬು

IMG-20210929-WA0041

 

ದಾವಣಗೆರೆ: ನಿಮ್ಮ ಮುಂದಿನ ಭವಿಷ್ಯಕ್ಕಾಗಿ ನೀವು ಓದಬೇಕು ಓದಿದರೆ ಮಾತ್ರ ಭವಿಷ್ಯ ಸದೃಢಗೊಳ್ಳಲು, ಜ್ಞಾನ ಗಳಿಸಲು ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವೆಂಕಟೇಶ್ ಬಾಬು ಹೇಳಿದರು. ಅವರು ಇಂದು ನಗರದ ಸ್ತನಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪುನಶ್ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರೊನ ಲಾಕ್ ಡೌನ್ ಸಮಯದಿಂದ ಇತ್ತೀಚಿಗಿನವರೆಗೂ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವೆ ಕಡಿಮೆಯಾಗಿಬಿಟ್ಟಿದೆ ಓದುವುದನ್ನು ರೂಢಿ ಮಾಡಿಕೊಳ್ಳಬೇಕು ಪ್ರತಿನಿತ್ಯ ಓದುವ ಹವ್ಯಾಸದಿಂದ ಜ್ಞಾನ ಅಭಿವೃದ್ಧಿ ಸಮಾಜದ ತಿಳುವಳಿಕೆ ಸಮಾಜದಲ್ಲಿ ಒಳ್ಳೇದು ಕೆಟ್ಟದನ್ನು ನಿರ್ಧರಿಸುವ ತಂತ್ರಗಾರಿಕೆ ತಿಳಿಯುತ್ತದೆ ಎಂದು ಹೇಳಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಕೋರ್ಸ್ನ ಆಯ್ಕೆ ಮಾಡುವಾಗ ತನ್ನ ಸ್ವ ಸಾಮರ್ಥ್ಯ ಏನೆಂಬುದನ್ನು ಅರಿತು ಕೊಂಡು ಮುಂದೆ ತಾನು ಏನಾಗಬೇಕು ಎಂಬುದನ್ನು ತಿಳಿದುಕೊಂಡು ಕೋರ್ಸಿನ ಆಯ್ಕೆ ಮಾಡಿಕೊಳ್ಳಬೇಕು ಇದರಿಂದ ತಮ್ಮ ಗುರಿಯನ್ನು ಸುಲಭವಾಗಿ ಮುಟ್ಟಲು ಸಾಧ್ಯ ಇದಕ್ಕೆ ಸತತ ಪ್ರಯತ್ನ ಆತ್ಮವಿಶ್ವಾಸ ಹಾಗೂ ನಂಬಿಕೆ ಬಹುಮುಖ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಾಣಿಜ್ಯ ವಿದ್ಯಾರ್ಥಿಗಳಿಗೆ ತಮ್ಮ ಪಿಯುಸಿ ನಂತರ ಹಲವಾರು ಅವಕಾಶಗಳಿವೆ ವಿದ್ಯಾರ್ಥಿಗಳು ಒಂದಿಷ್ಟು ಕೌಶಲ್ಯಗಳನ್ನು ಕಲಿತುಕೊಂಡರೆ ಉದ್ಯೋಗ ತಮ್ಮ ಕೈಯಲ್ಲಿದ್ದಂತೆ ಉದ್ಯೋಗ ಮಾರುಕಟ್ಟೆಗೆ ಬೇಕಾದ ಕೌಶಲ್ಯಗಳನ್ನು ತಮ್ಮ ಕಾಲೇಜು ಮಟ್ಟದಲ್ಲಿದಲ್ಲೇ ಅರಿತುಕೊಂಡರೆ ಸುಲಭವಾಗಿ ಉದ್ಯೋಗಗಳಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ ಬಿಸಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ ಕೆ ಷಣ್ಮುಖ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ವಾಸ್ತವದ ಸ್ಥಿತಿಯನ್ನು ಅರಿತುಕೊಳ್ಳುವುದು ಬಹುಮುಖ್ಯವಾಗಿದೆ ಪ್ರತಿದಿನದ ಪ್ರಚಲಿತ ಘಟನೆಗಳನ್ನು ನೋಡಿಕೊಂಡು ಅದರೊಂದಿಗೆ ಜೀವನ ನಡೆಸುವುದು ಇಂದು ಸಾಮಾನ್ಯವಾಗಿದೆ ಹಾಗಾಗಿ ಪ್ರತಿದಿನದ ಮಾಹಿತಿಯನ್ನು ಕ್ರೋಡೀಕರಿಸಿಕೊಳ್ಳುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳಿಸಿಕೊಂಡರೆ ಅವರ ಯಶಸ್ಸಿಗೆ ಸಹಾಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಲೆಕ್ಕಪರಿಶೋಧಕರಾದ ಯಶ್ವಂತ್ರವರು ವಿದ್ಯಾರ್ಥಿಗಳಿಗೆ ಚಾರ್ಟಡ್ ಅಕೌಂಟೆಂಟ್ ಹೇಗೆ ಮಾಡುವುದು ಎಂಬುದನ್ನು ವಿವರವಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಕೆ ರಾಜಶೇಖರ ಅವರು ವಹಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳಿಂದ ಸಿಗುವ ಎಲ್ಲಾ ಸಂಪನ್ಮೂಲಗಳನ್ನು ಸರಿಯಾಗಿ ಆಲಿಸಿಕೊಂಡು ಅದರ ಉಪಯೋಗವನ್ನು ಪಡೆದುಕೊಳ್ಳಬೇಕು ಈ ರೀತಿಯ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಹುಮ್ಮಸ್ಸು ತರುವ ಪ್ರಯತ್ನ ಕಾಲೇಜಿನಿಂದ ಆಗಾಗ ನಡೆಯುತ್ತಿರುತ್ತದೆ ಇದರಲ್ಲಿ ವಿದ್ಯಾರ್ಥಿಗಳು ಉಲ್ಲಾಸದಿಂದ ಪಾಲ್ಗೊಳ್ಳಬೇಕು ಎಂದು ಹೇಳಿದರು .
ಕಾಲೇಜಿನ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ರವರು ಕಾರ್ಯಕ್ರಮದಲ್ಲಿ ಹಾಜರಿದ್ದರು

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!