ನಾವು ಬೀದಿಗಿಳಿದು ಹೋರಾಟ ಮಾಡೋರು, ಅವ್ರು ಎಸಿ ರೂಂ ನಲ್ಲಿ ಹೋರಾಟ ಮಾಡ್ತಾರೆ.! ವಚನಾನಂದ ಶ್ರೀಗೆ ಟಾಂಗ್ ಕೊಟ್ಟ ಜಯಮೃತ್ಯುಂಜಯ ಶ್ರೀ

ದಾವಣಗೆರೆ: ಕೆಲವರು ಎಸಿ ರೂಂನಲ್ಲಿ ಕೂತು ಹೋರಾಟ ನಡೆಸಿದರೆ, ಮತ್ತೆ ಕೆಲವರು ಬೀದಿಗಿಳಿದು ಹೋರಾಟ ಮಾಡುತ್ತಾರೆ. ನಾವು ಬೀದಿಗಿಳಿದು ಹೋರಾಡುವವರು. ಸ್ವಾತಂತ್ರ್ಯ ಹೋರಾಟ ಕೂಡ ಇದೇ ರೀತಿ ಆಗಿತ್ತು. ನೆಹರು ಮನೆಯಲ್ಲಿ ಕೂತು ಹೋರಾಟ ಮಾಡಿದರೆ, ಗಾಂಧಿಜೀ ಬೀದಿಗಿಳಿದು ಹೋರಾಟ ಮಾಡಿದ್ರು, ಭಗತ್ ಸಿಂಗ್ ಅದರಾಚೆಗೆ ಬಂದು ಹೋರಾಟ ಮಾಡಿದರು. ದೈಹಿಕವಾಗಿ ಸ್ಪಂದಿಸದೇ ಇರುವವರು ಎಸಿಯಲ್ಲಿ ಕೂತು ಹೋರಾಟ ಮಾಡ್ತಾರೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳಿಗೆ ಟಾಂಗ್ ಕೊಟ್ಟರು.
ಅದೇ ರೀತಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮತ್ತು ಹೋರಾಟ ಸಮಿತಿಯ ರಾಷ್ಟ್ರಾಧ್ಯಕ್ಷ ವಿಜಾಯನಂದ ಕಾಶಪ್ಪನವರ್ ಮಾತನಾಡಿ, ಹೋರಾಟಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ. ಯಾವಾಗ ಹೋಗುತ್ತಾರೋ ಆವಾಗ ಬಿಳ್ಕೋಡುಗೆ ಕೊಡುತ್ತೇವೆ. ಹೋರಾಟಕ್ಕೆ ಬಂದಿದ್ದರು ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ವಚನಾನಂದ ಸ್ವಾಮೀಜಿಗೆ ಚಾಟಿ ಬೀಸಿದರು.
ವಚನಾನಂದ ಸ್ವಾಮೀಜಿ ಸಾಫ್ಟ್ವೇರ್, ನಾವು ಹಾರ್ಡ್ ವೇರ್, ಅವರು ಎಸಿ ರೂಮ್ನಲ್ಲಿ ಕೂತು ಹೋರಾಟ ಮಾಡುತ್ತಾರೆ. ನಾವು ಬಿಸಿಲಲ್ಲಿ ಹೋರಾಟ ಮಾಡುತ್ತೇವೆ ಎಂದು ಟಾಂಗ್ ಕೊಟ್ಟರು.
ನಾವು ಬೀದಿಗಿಳಿದು ಹೋರಾಟ ಮಾಡೋರು, ಅವ್ರು ಎಸಿ ರೂಂ ನಲ್ಲಿ ಹೋರಾಟ ಮಾಡ್ತಾರೆ: ವಚನಾನಂದ ಶ್ರೀಗೆ ಟಾಂಗ್ ಕೊಟ್ಟ ಜಯಮೃತ್ಯುಂಜಯ ಶ್ರೀ
