Ex Mayor Debt Story: ಕೋಟ್ಯಾಂತರ ರೂಪಾಯಿ ಬಡ್ಡಿ ಕಟ್ಟಿದ್ರಾ ಮಾಜಿ ಮೇಯರ್.! ಇದೀಗ ಬಡ್ಡಿ ಕಥೆ ಬಿಚ್ಚಿಟ್ಟಿದ್ದು ಯಾಕೆ ಗೊತ್ತಾ.?

ದಾವಣಗೆರೆ: ಕೆಲವು ರಾಜಕಾರಣಿಗಳು, ಅಧಿಕಾರಿಗಳು ತಾವು ಮಾಡಿರುವ ಹೊಸ ಲೇಔಟ್ ಗೆ ಮಾಡಿದ ಅನವಶ್ಯಕ ತೊಂದರೆಯಿಂದಾಗಿ 5.60 ಕೋಟಿ ಬಡ್ಡಿ ಕಟ್ಟುವಂತೆ ಮಾಡಿದರು ಎಂದು ಮಾಜಿ ಮೇಯರ್ ಬಿ.ಜೆ. ಅಜಯಕುಮಾರ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ರೋಷಾವೇಷದಿಂದ ಈ ಸತ್ಯ ಬಾಯ್ಬಿಟ್ಟಿರುವ ಅಜಯಕುಮಾರ್, ಇದುವರೆಗೂ ನಾನು ಯಾರಿಗೂ ನೋವು ಮಾಡಿದವನಲ್ಲ. ಆದರೆ, ದಾವಣಗೆರೆ ನಗರದಲ್ಲಿ ನೂತನ ಲೇಔಟ್ ಮಾಡುವ ಸಂದರ್ಭದಲ್ಲಿ ಕೆಲ ಅಧಿಕಾರಿಗಳು,ರಾಜಕಾರಣಿಗಳು ಸುಮಾರು 7 ಕೋಟಿ ಹಣ ನಿಲ್ಲಿಸಿಕೊಂಡು, ನಾನು ತಿಂಗಳಿಗೆ 80 ಲಕ್ಷದಂತೆ ಬಡ್ಡಿ ಕಟ್ಟುವಂತೆ ಮಾಡಿದರು. ಆದರೂ ತಾವೇನೂ ಎದೆ ಗುಂದಲಿಲ್ಲ ಎಂದು ಹೇಳಿದ್ದಾರೆ.
ಪಾಲಿಕೆ ಚುನಾವಣೆ ವೇಳೆ ವಾರ್ಡ್ ಜನರಿಗೆ ಹಣ ಹಂಚಿ ಅಜಯಕುಮಾರ್ ಸಾಲಗಾರರಾಗಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಆ ವದಂತಿಗೆ ಅಜಯಕುಮಾರ್ ಈ ಮೂಲಕ ಸ್ಪಷ್ಟನೆ ನೀಡಿದ್ದಾರೆ ಎಂದು ಅಲ್ಲಿ ನೆರೆದಿದ್ದವರು ಮಾತಾಡಿಕೊಂಡಿದ್ದು ಕೇಳಿಬಂತು.