ಮಹಾತ್ಮ ಗಾಂಧಿಜಿಯ ಜೀವನದ ದಾರಿ, ನಮಗೆಲ್ಲಾ ಮಾರ್ಗದರ್ಶನ – ಜೆಡಿಎಸ್ ಹಿರಿಯ ಮುಖಂಡ, ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್

ದಾವಣಗೆರೆ: ಅಧಿಕಾರದ ಯಾವುದೇ ಲಾಲಸೆ ಇಲ್ಲದೇ ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟು ದೇಶ ಸೇವೆಯಲ್ಲಿ ನಿರತರಾಗಿ ಅಮರರಾದ ಮಹಾತ್ಮಗಾಂಧಿಜಿಯವರ ಜೀವನದ ದಾರಿ ನಮಗೆಲ್ಲಾ ಮಾರ್ಗದರ್ಶನ ಎಂದು ಜೆಡಿಎಸ್ ಹಿರಿಯ ಮುಖಂಡ, ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಹೇಳಿದರು.
ಜನತಾದಳ ಜಾತ್ಯಾತೀತದ ಉತ್ತರ ವಿಧಾನಸಭಾ ಕ್ಷೇತ್ರದ ಘಟಕದಿಂದ ನಗರದ ಪಿ.ಜೆ.ಬಡಾವಣೆಯಲ್ಲಿನ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಗೃಹ ಕಚೇರಿಯಲ್ಲಿ ಆಚರಿಸಲಾದ ಗಾಂಧಿಜಯAತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಾತ್ಮಾ ಗಾಂಧೀಜಿಯವರು ತಮ್ಮ ಅಹಿಂಸಾ ಮಾರ್ಗದಿಂದ ಬ್ರಿಟೀಷರ ವಿರುದ್ಧ ಹೋರಾಡಿ ನಮ್ಮ ಭಾರತ ದೇಶವನ್ನು ಸ್ವತಂತ್ರಗೊಳಿಸಿದರು. ಅವರ ತತ್ವ ಆದರ್ಶಗಳು ಎಂದೆAದಿಗೂ ಅಮರ ಎಂದು ಹೇಳಿದರು.
ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಬಾತಿ ಶಂಕರ್ ಮಾತನಾಡಿ, ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತಿçಜಿಯವರ ತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕಿದ್ದು, ಅವರು ಹಾಕಿಕೊಟ್ಟ ಮಾರ್ಗದರ್ಶನ ನಮಗೆಲ್ಲಾ ದಾರಿದೀಪವಾಗಿದೆ. ಇಂತಹ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡು ಪಾಲಿಸುವುದರ ಜೊತೆಗೆ ನಮ್ಮ ಮುಂದಿನ ಪೀಳಿಗೆಗೆ ತೋರಿಸಿ ಕೊಡಬೇಕಾಗಿರುವುದು ಅಗತ್ಯವಾಗಿದೆ. ಅಲ್ಲದೇ ನಮ್ಮೆಲ್ಲರ ಮಹತ್ತರ ಜವಾಬ್ದಾರಿ ಮತ್ತು ಕರ್ತವ್ಯವೂ ಆಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಟಿ.ಅಸ್ಗರ್, ಮುಖಂಡರಾದ ಗಣೇಶ್ ದಾಸಕರಿಯಪ್ಪ, ದಕ್ಷಿಣ ಅಧ್ಯಕ್ಷ ಮನ್ಸೂರ್, ವಕೀಲರಾದ ಯೋಗೇಶ್, ಫಕ್ರುದ್ದೀನ್, ಎಂ.ಆರ್.ಮುದೆನೂರ್, ಮಹಿಳಾ ಜಿಲ್ಲಾ ಅಧ್ಯಕ್ಷೆ ಶೀಲಾಕುಮಾರ್, ಹೊನ್ನಾಳಿ ಮಹಿಳಾ ಮುಖಂಡರಾದ ಪಾರ್ವತಿ, ಅಲ್ಪಸಂಖ್ಯಾತರ ಜಿಲ್ಲಾ ಅಧ್ಯಕ್ಷ ಜಮೀರ್ ಅಹ್ಮದ್, ಅಮರೇಶ್, ವೆಂಕಟೇಶ್ ಕಣ್ಣಾಳರ್ ಭಾಷಾ ಇದ್ದರು.