Morning Walkers: ವಾಯು ವಿಹಾರಿಗಳನ್ನ ಸುಲಿಗೆ ಮಾಡುತ್ತಿದ್ದ 3 ಜನ ಕಳ್ಳರ ಬಂಧನ:ಬಂಗಾರ ಹಾಗೂ ಬೈಕ್ ವಶಕ್ಕೆ ಪಡೆದ ಪೋಲೀಸ್

ದಾವಣಗೆರೆ: ವಾಯು ವಿಹಾರ ಮಾಡುತ್ತಿದ್ದ ವ್ಯಕ್ತಿಗಳನ್ನು ಹೆದರಿಸಿ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ ಕಳುವು ಮಾಡಿದ್ದ ಬಂಗಾರದ ಉಂಗುರ, ಸರ ಮತ್ತು ಬೈಕನ್ನು ವಶಕ್ಕೆ ಪಡೆದಿದ್ದಾರೆ. ವಾಯು ವಿಹಾರ ಮಾಡುತ್ತುದ್ದವರನ್ನು ಆರೋಪಿಗಳು ಅಡ್ಡಗಟ್ಟಿ, ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದರು. ಕಳೆದ ಒಂದು ವಾರದ ಹಿಂದಷ್ಟೆ ಮಹಾಲಕ್ಷ್ಮಿ ಲೇಔಟ್ ಬಾತಿ ಕೆರೆ ಕಡೆಗೆ ಹೋಗುವ ರಸ್ತೆ, ಬಂಜಾರ ಹಾಸ್ಟೆಲ್ ಹತ್ತಿರ ಬಂಗಾರದ ಉಂಗುರ, ಸರ ಕಿತ್ತುಕೊಂಡು ಹೋಗಿರುವ ಬಗ್ಗೆ ವ್ಯಕ್ತಿಯೋರ್ವರು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ದಾವಣಗೆರೆ ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ನಾಗೇಶ್ ಐತಾಳ್ ಇವರ ಮಾರ್ಗದರ್ಶನಲ್ಲಿ ತನಿಖಾಧಿಕಾರಿಯಾದ ಕೆಟಿಜೆ ನಗರ ವೃತ್ತದ ಸಿಪಿಐ ಹೆಚ್.ಗುರುಬಸವರಾಜ್, ಪ್ರಸಾದ ಮತ್ತು ಪಿಎಸ್ಐ ರೇಣುಕ ಸಿಬ್ಬಂದಿಗಳನ್ನೊಳಗೊಂಡ ತಂಡವು ಸದರಿ ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 03 ಆರೋಪಿತರನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳಿಂದ 17 ಗ್ರಾಂ ತೂಕದ ಬಂಗಾರದ ಉಂಗುರ ಮತ್ತು ಚೈನ್ ಸರವನ್ನು ಕಳ್ಳತನವಾದ ಬೈಕನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.