Breaking: ನಾಳೆಯಿಂದ ಎಲ್ಲಾ ಸಂತೆಗಳಿಗೆ ನಿರ್ಬಂದ, ಸರ್ಕಾರದಿಂದ ನೂತನ ಆದೇಶ, ಎಪಿಎಂಸಿ ಸಮಯದಲ್ಲಿ ಬದಲಾವಣೆ, ಪರಿಷ್ಕ್ರತ ಆದೇಶದಲ್ಲಿ ಮತ್ತೇನಿದೆ ತಿಳಿಯಿರಿ👇

- ಹೆಚ್ ಎಂ ಪಿ ಕುಮಾರ್
ದಾವಣಗೆರೆ: ಪ್ರಸ್ತುತ ಮಾರುಕಟ್ಟೆಯಲ್ಲಿ ಆಗುತ್ತಿರುವ ಜನಸಂದಣೆ/ನೂಕು ನುಗ್ಗಲುಗಳನ್ನು ತಪ್ಪಿಸಲು ದಿನಾಂಕ:2-5-2021 ರಿಂದಲೇ ಅನ್ವಯವಾಗುವಂತೆ ಎಲ್ಲಾ ರೀತಿಯ ಸಂತೆ, ವಾರದ ಸಂತೆಗಳನ್ನು ನಿರ್ಬಂಧಿಸಲಾಗಿದೆ.
ಇದರ ಬದಲಿಗೆ ಬೆಳಿಗ್ಗೆ 6.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೂ ಹಾಪ್ಕಾಮ್ಸ್, ಎಲ್ಲಾ ಹಾಲಿನ ಬೂತುಗಳು, ತಳ್ಳುವಗಾಡಿ ಮೂಲಕ ಹಣ್ಣು ತರಕಾರಿಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡದೆ, ಮಾರುಕಟ್ಟೆ ಬೆಲೆಗೆ ಮಾರಾಟ ಮಾಡುವುದು ಹಾಗೂಕೋವಿಡ್-19 ನಿಯಮಗಳನ್ನು ಪಾಲಿಸುವುದರೊಂದಿಗೆ ಅನುಮತಿಸಲಾಗಿದೆ.
ಎಪಿಎಂಸಿ ಹಾಗೂ ದಿನಸಿ ಅಂಗಡಿಗಳನ್ನು ಬೆಳಿಗ್ಗೆ 6.00 ರಿಂದ ಮಧ್ಯಾಹ್ನ 12.00 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿಸಿದೆ. ಈ ಆದೇಶವನ್ನು ಮುಖ್ಯ ಆಯುಕ್ತರು, ಬಿಬಿಎಂಪಿ, ಪೊಲೀಸ್ ಆಯುಕ್ತರು, ಜಿಲ್ಲೆಗಳ ಜಿಲ್ಲಾಧಿಕಾರಿಗಳು,
ಪೊಲೀಸ್ ವರಿಷ್ಠಾಧಿಕಾರಿಗಳು, ಇಲಾಖೆಗಳ ಮುಖ್ಯಸ್ಥರು ಹಾಗೂ ಸಂಬಂಧಿಸಿದ ಪ್ರಾಧಿಕಾರಗಳು
ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸತಕ್ಕದ್ದು. ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಸದಸ್ಯ ಕಾರ್ಯದರ್ಶಿಯಾದ ಎನ್. ಮಂಜುನಾಥ ಪ್ರಸಾದ್, ಭಾ.ಆ.ಸೇ ಸೇರ್ಪಡೆ ಮಾಡಿ ಆದೇಶಿಸಿದ್ದಾರೆ.