ಸುವರ್ಣ ಲೇಪಿತ ಹಿತ್ತಾಳೆಯ ಶ್ರೀ ದುರ್ಗಾಂಭಿಕಾ ದೇವಿಯ 5 ಅಡಿಯ ಉತ್ಸವ ಮೂರ್ತಿಯನ್ನ ಹರಕೆಯ ರೂಪದಲ್ಲಿ ನೀಡಿದ ಪದ್ಮ ಬಸವಂತಪ್ಪ

navarathri durgambika devi

ದಾವಣಗೆರೆ: ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿಯ ಐದು ಅಡಿ ಉತ್ಸವ ಮೂರ್ತಿಯನ್ನು ಸುವರ್ಣ ಲೇಪಿತ ಹಿತ್ತಾಳೆಯ ಮೂರ್ತಿಯನ್ನು ಹಿಂದಿನ ಜಿಲ್ಲಾ ಪಂಚಾಯತ್ ಸಿಇಓ ಪದ್ಮ ಬಸವಂತಪ್ಪ ಅವರು ಕೊಡುಗೆ ನೀಡಿರುವುದಾಗಿ ಶ್ರೀ ದುರ್ಗಾಂಬಿಕಾದೇವಿ ದೇವಸ್ಥಾನ ಟ್ರಸ್ಟ್‌ನ ಧರ್ಮದರ್ಶಿ ಗೌಡರ ಚನ್ನಬಸಪ್ಪ ತಿಳಿಸಿದರು.

ನವರಾತ್ರಿ ಉತ್ಸವದಂದು ಪ್ರತಿವರ್ಷ ಪಿಓಪಿಯಿಂದ ಮಾಡಿದ ಮೂರ್ತಿಯನ್ನು ಉತ್ಸವಕ್ಕೆ ಬಳಸಲಾಗುತ್ತಿತ್ತು. ಮತ್ತು ಪೂಜೆಗೆ ಕೂರಿಸಲಾಗುತ್ತಿತ್ತು. ಆದರೆ, ಪದ್ಮ ಬಸವಂತಪ್ಪ ಅವರು ದೇವರಿಗೆ ಹರಕೆಯ ಸಮರ್ಪಿಸುವುದಾಗಿ ಹೇಳಿ ೫ ಲಕ್ಷ ರೂ., ಮೊತ್ತದಲ್ಲಿ ೫ ಅಡಿ ಇರುವಯ ಸುವರ್ಣ ಲೇಪಿತ ಹಿತ್ತಾಳೆಯ ಮೂರ್ತಿಯನ್ನು ಸಮರ್ಪಿಸಿದ್ದು, ನಾಯಕನಹಟ್ಟಿಯ ವೆಂಕಟೇಶಾಚಾರ್ ಎಂಬುವವರು ಈ ಮೂರ್ತಿಯನ್ನು ಮಾಡಿಕೊಟ್ಟಿದ್ದಾರೆ. ಇದೇ ದಸರಾ ಉತ್ಸವದಲ್ಲಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಇನ್ನುಮುಂದೆ ಪ್ರತಿವರ್ಷವೂ ಅದೇ ಮೂರ್ತಿಯನ್ನು ಉತ್ಸವಕ್ಕೆ ಮತ್ತು ಪೂಜೆ ಸಲ್ಲಿಸಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!