ದಾವಣಗೆರೆ ತಹಸೀಲ್ದಾರ್ ಕಚೇರಿಯಲ್ಲಿ ‘ಕನ್ನಡಕ್ಕಾಗಿ ನಾವು ಅಭಿಯಾನ’ ಗೀತಗಾಯನ ಆಯೋಜನೆ

ದಾವಣಗೆರೆ :ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ನವೆಂಬರ್ 01 ರಂದು ವಿಶೇಷವಾಗಿ ರಾಜ್ಯಾದ್ಯಂತ ಆಚರಿಸಲಾಗುತ್ತಿದ್ದು . ಕನ್ನಡ ರಾಜ್ಯೋತ್ಸವದ ಅಂಗವಾಗಿ “ಕನ್ನಡಕ್ಕಾಗಿ ನಾವು ಅಭಿಯಾನದ” ಭಾಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇಂದು ಬೆಳಿಗ್ಗೆ ಲಕ್ಷ ಕಂಠಗಳ ಗೀತಗಾಯನ ಕಾರ್ಯಕ್ರಮ ಆಯೋಜಿಸಿತ್ತು .
ಈ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಆವರಣದಲ್ಲಿ ತಹಸಿಲ್ದಾರ್ ಗಿರೀಶ್ ಕಾರ್ಯಕ್ರಮದ ಉದ್ಘಾಟನೆ ಮಾಡಿದರು.
ಕಚೇರಿಗಳ ಅಧಿಕಾರಿ / ಸಿಬ್ಬಂದಿಗಳು ಒಟ್ಟಾಗಿ ಕನ್ನಡದ ಶ್ರೇಷ್ಠತೆಯನ್ನು ಸಾರುವ ಡಾ.ಕುವೆಂಪುರವರ “ ಬಾರಿಸು ಕನ್ನಡ ಡಿಂಡಿಮವ ” , ಡಾ.ಕೆ.ಎಸ್.ನಿಸಾರ್ ಅಹಮದ್ ರವರ “ ಜೋಗದ ಸಿರಿಬೆಳಕಿನಲ್ಲಿ ” ಹಾಗೂ ಹಂಸಲೇಖರವರ ” ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ” ಈ ಗೀತೆಗಳನ್ನು ಹಾಡಿದರು
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ಹರ್ಷ, ಅಗ್ನಿಶಾಮಕ ದಳದ ಬಸವಪ್ರಭು ಶರ್ಮ, ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ವರ್ಗದವರು ಇದ್ದರು.
ದಾವಣಗೆರೆ ತಹಸೀಲ್ದಾರ್ ಕಚೇರಿಯಲ್ಲಿ ‘ಕನ್ನಡಕ್ಕಾಗಿ ನಾವು ಅಭಿಯಾನ’ ಗೀತಗಾಯನ ಆಯೋಜನೆ