ಹುಬ್ಬಳ್ಳಿ ನಗರದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ಮೊಳಗಿದ ಕನ್ನಡ ಡಿಂಡಿಮ

ಹುಬ್ಬಳ್ಳಿ :ಹುಬ್ಬಳ್ಳಿ ನಗರದಲ್ಲಿಂದು ಮಹಾನಗರಪಾಲಿಕೆ ಏರ್ಪಡಿಸಿದ್ದ ಕನ್ನಡ ಸಂಸ್ಕೃತಿ ವೈಭವ, ಕನ್ನಡದ ಶ್ರೇಷ್ಟತೆ ಸಾರುವ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಭಾಗವಹಿಸಿದರು.
ಕನ್ನಡದ ಶ್ರೇಷ್ಠತೆಯನ್ನು ಸಾರುವ ಡಾ.ಕುವೆಂಪುರವರ “ ಬಾರಿಸು ಕನ್ನಡ ಡಿಂಡಿಮವ ” , ಡಾ.ಕೆ.ಎಸ್.ನಿಸಾರ್ ಅಹಮದ್ ರವರ “ ಜೋಗದ ಸಿರಿಬೆಳಕಿನಲ್ಲಿ ” ಹಾಗೂ ಹಂಸಲೇಖರವರ ” ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ” ಈ ಗೀತೆಗಳನ್ನು ಹಾಡಿದರು
ಸುರಪುರ ಶಾಸಕ ರಾಜೂಗೌಡ (ನರಸಿಂಹನಾಯಕ), ಮಾಜಿ ಸಂಸದ ಪ್ರೊ|| ಐ.ಜಿ.ಸನದಿ, ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ|| ಸುರೇಶ ಇಟ್ನಾಳ ಮತ್ತಿತರರು ಇದ್ದರು