ನಟ ಪುನೀತ್ ನಿಧನದ ಸುದ್ದಿ ಕೇಳಿ ಭಾವುಕರಾದ ಸಚಿವ ಭೈರತಿ ಬಸವರಾಜ್

ba basavaraj condolences to Puneeth Rajkumar

ಬೆಂಗಳೂರು: ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ನಟ ಪುನೀತ್ ರಾಜಕುಮಾರ್ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ಕೇಳಿ ಕೆಲ ಕ್ಷಣಗಳ ಕಾಲ ನಾನು ದಿಗ್ಬಂತಾನಾದೆ , ಜೊತೆಗೆ ಭಾವುಕನು ಆದೆ .ಬಾಲ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪುನೀತ್ ರಾಜಕುಮಾರ್ ಅವರ ಹಲವಾರು ಚಿತ್ರಗಳನ್ನು ನಾನು ನೋಡಿದ್ದೇನೆ .

ಕನ್ನಡದ ಮೇರು ನಟ , ವರನಟ , ಡಾ || ರಾಜಕುಮಾರ್ ರವರ ಪುತ್ರರಾಗಿರುವ ಪುನೀತ್ ಅವರಿಗೆ ನಟನೆ ಎನ್ನುವುದು ರಕ್ತದಲ್ಲಿಯೇ ಬಂದಿತ್ತು . ತಂದೆ ರಾಜಕುಮಾರ್ ಮತ್ತು ತಾತ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರ ಆಶೀರ್ವಾದವೇ ಪುನೀತ್ ರನ್ನು ಪವರ್ ಸ್ಟಾರ್ ಸ್ಥಾನಕ್ಕೆ ತಂದು ನಿಲ್ಲಿಸಿತ್ತು ಎಂದರೆ ತಪ್ಪಾಗಲಾರದು .

ಬಹಳಷ್ಟು ಯುವ ಜನತೆಗೆ ಆದರ್ಶ ಹಾಗೂ ಕಣ್ಮಣಿಯಾಗಿದ್ದ ಪುನೀತ್ ರಾಜಕುಮಾರ್ ಅವರ ಅಗಲಿಕೆ ನೋವುಂಟುಮಾಡಿದೆ . ಅವರ ಅಕಾಲಿಕ ಸಾವು ಕನ್ನಡ ಚಿತ್ರರಂಗಕ್ಕೆ ಭರಿಸಲಾಗದ ನಷ್ಟವಾಗಿದೆ.

ಅವರ ಆತ್ಮಕ್ಕೆ ಶಾಂತಿಯನ್ನು ದೇವರು ನೀಡಲಿ ಹಾಗೂ ಅವರ ಕುಟುಂಬದ ಸದಸ್ಯರಿಗೆ , ಬಂಧು – ಬಳಗ ಹಾಗೂ ಅಸಂಖ್ಯಾತ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ನಾನು ಪ್ರಾರ್ಥಿಸುತ್ತೇನೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ ( ಬೈರತಿ)ಬಸವರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!