ಬಾಡಿಗೆ ಕಾರು ವಂಚನೆ ಪ್ರಕರಣ ಭೇದಿಸಿದ ಬಡಾವಣೆ ಠಾಣೆ ಪೋಲಿಸ್ – 1.6 ಕೋಟಿ ಮೌಲ್ಯದ ಕಾರುಗಳ ವಶ 

ದಾವಣಗೆರೆ :ಕಾಂತರಾಜ ಎನ್ನುವವರು ಕೆಎ – 17 – ಜೆಡ್ -9330 ನೇ ನಂಬರಿನ ಬಿಳಿ ಬಣ್ಣದ ಸ್ವೀಪ್ ಕಾರನ್ನು ಅರ್ಜುನ ಹಾಗೂ ಇನ್ನಿತರರು ಕಂಪನಿಗೆ ಬಾಡಿಗೆ ಬಿಡುವ ನೆಪದಲ್ಲಿ ತೆಗೆದುಕೊಂಡು ಹೋಗಿ ಸದರಿ ಕಾರನ್ನು ಹಾಗು ಬಾಡಿಗೆ ಹಣವನ್ನು ವಾಪಸ್ ನೀಡದೇ ನಮ್ಮ ಕಾರನ್ನು ಬೇರೆಯವರಿಗೆ ಒತ್ತೆ ಇಟ್ಟು ಹಣ ಪಡೆದಿರುವುದಾಗಿ ತಿಳಿದಿದ್ದು.

ಈ ನಿಟ್ಟಿನಲ್ಲಿ ನಮ್ಮ ಕಾರನ್ನು ಮತ್ತು ಬಾಡಿಗೆ ಹಣವನ್ನು ವಾಪಸ್ ಕೊಡಿಸಬೇಕು ಎಂದು ಕೇಟಿಜೆ ನಗರ ಠಾಣೆಗೆ ದೂರು ಕೊಟ್ಟಿದ್ದರು.

ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು
,ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ನರಸಿಂಹ ತಾಮ್ರಧ್ವಜ ಮತ್ತು ಕೆಟಿಜೆ ನಗರ ವೃತ್ತ ನಿರೀಕ್ಷಕರಾದ ಶ್ರೀ.ಹೆಚ್ ಗುರುಬಸವರಾಜ ರವರ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಪ್ರಭು ಡಿ ಕೆಳಗಿನಮನಿ ಆರೋಪಿತ ರಿಂದ ಇದೇ ರೀತಿ ಸುಮಾರು 15 ರಿಂದ 20 ಜನರ ಕಾರುಗಳನ್ನು ತೆಗೆದುಕೊಂಡು ಹೋಗಿ ಮೋಸ ಮಾಡಿರುವುದಾಗಿ ತಿಳಿದುಬಂದಿದೆ

ಸಿಬ್ಬಂದಿಗಳಾದ ಅಬ್ದುಲ್ ಖಾದರ್ ಜಿಲಾನಿ ಶಂಕರ್ ಜಾದವ್,ಪ್ರಕಾಶ್ ಟಿ, ಮಂಜಪ್ಪ,ಗಿರೀಶ್ ಗೌಡ,ರಾಘವೇಂದ್ರ ಶಾಂತಕುಮಾರ್ ಎ 2 ಆರೋಪಿತನನ್ನು ಬಂಧಿಸಿ , ಒಟ್ಟು 01.06 / – ಕೋಟಿ ರೂ ಮೌಲ್ಯದ 15 ವಿವಿಧ ಕಾರುಗಳನ್ನು ವಶ ಪಡಿಸಿ ಕೊಂಡಿದ್ದಾರೆ

ಪ್ರಮುಖ ಆರೋಪಿ ಅರ್ಜುನ ನಿಟ್ಟುವಳ್ಳಿ ತಲೆಮರೆಸಿಕೊಂಡಿದ್ದು. ಆರೋಪಿತನ ಬಗ್ಗೆ ಖಚಿತ ಮಾಹಿತಿ ಇದ್ದು ಶಿಘ್ರದಲ್ಲಿ ಬಂಧಿಸುವುದಾಗಿ ತಿಳಿಸಿದ್ದಾರೆ. .

Leave a Reply

Your email address will not be published. Required fields are marked *

error: Content is protected !!