ಅಕ್ರಮಗಳಿಗೆ ಕುಮ್ಮಕ್ಕು, ಮಮೂಲಿಗಾಗಿ ಬೆದರಿಕೆ.!? ಇಬ್ಬರು ಪೊಲೀಸರ ವಿರುದ್ಧ ದೂರು ದಾಖಲು

IMG-20211103-WA0131

ವಿಜಯನಗರ ( ಕೂಡ್ಲಿಗಿ): ವಿಜಯನಗರ ಜಿಲ್ಲೆ ಕೂಡ್ಲಿಗಿಯಲ್ಲಿ ಅಕ್ರಮಗಳಿಗೆ ಕುಮ್ಮಕ್ಕು ನೀಡುತ್ತಿದ್ದು ಮಾಮೂಲು ಕೊಡದಿದ್ದರೆ ಕೇಸ್ ಹಾಕುವುದಾಗಿ ತಮಗೆ ಬೆಧರಿಸಿದ್ದಾರೆಂದು. ದೂರುದಾರ ನೀಡಿದ ಹೇಳಿಕೆಯಂತೆ ಕೂಡ್ಲಿಗಿ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಪೇದೆಗಳ ವಿರುದ್ಧ ಹೊಸಪೇಟೆ ಚಿತ್ವಾಡ್ಗಿ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.

ದೂರು ದಾರ ಕೂಡ್ಲಿಗಿ ತಾಲೂಕು ಈಚಲ ಬೊಮ್ಮನಹಳ್ಳಿ ಗ್ರಾಮದ ಈಡಿಗರ ಸಂತೋಷರವರ ನೀಡಿದ ಹೇಳಿಕೆಯಂತೆ, ಚಿತವಾಡ್ಗಿ ಪೊಲೀಸ್ ಠಾಣೆಯಲ್ಲಿ ಕೂಡ್ಲಿಗಿ ಪೊಲೀಸ್ ಪೇದೆಗಳಾದ ಪೂಜಾರಹಳ್ಳಿ ಮೂಲದ ಶರಣಪ್ಪ(PC1065) ಮತ್ತು ಬಣವಿಕಲ್ಲು ಮೂಲದ ಮಂಜುನಾಥ( PC1073) ಇವರಿಬ್ಬರ ವಿರುದ್ಧ ದೂರು ದಾಖಲಾಗಿದೆ. ಈ ಇಬ್ಬರು ಆರೋಪಿತರು ಅಕ್ರಮ ದಂಧೆಗಳಾದ ಅಕ್ರಮ ಮದ್ಯ ಮಾರಾಟ,ಮರಳು ಸಾಗಾಣಿಕೆಗೆ ಕುಮ್ಮಕ್ಕು ನೀಡಿದ್ದು, ಇದರಿಂದ ಬರುವ ಮಾಮೂಲು ವಸೂಲಿ ಮಾಡುತ್ತಾ ಮಾಮೂಲು ಕಮ್ಮಿಯಾದಲ್ಲಿ. ತಕ್ಷಣ ಅಕ್ರಮದಲ್ಲಿ ಭಾಗಿಯಾದವರನ್ನು ಕರೆಸಿ ಹಣ ನೀಡದಿದ್ದರೆ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇವೆ ಅಂತ ಬೆಧರಿಸುತ್ತಾರೆಂದು. ಈ ಬಗ್ಗೆ ನ್ಯಾಯ ಕೇಳಿದರೆ ಇವರು ತನಗೆ ಬೆಧರಿಕೆ ಹಾಕಿರುವುದಾಗಿ,ಅದಕ್ಕಾಗಿ ತನಗೆ ರಕ್ಷಣೆ ನೀಡಬೇಕೆಂದು ದೂರುದಾರ ಈಡಿಗರ ಸಂತೋಷ ಚಿತ್ವಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾರ ನೀಡಿದ್ದಾರೆ.

ಅವರ ಹೇಳಿಕೆಯನ್ವಯ ಕೂಡ್ಲಿಗಿ ಪೊಲೀಸ್ ಪೇದೆಗಳಾದ ಶರಣಪ್ಪ ಹಾಗೂ ಮಂಜುನಾಥರ ವಿರುದ್ಧ, 2ರಂದು ಚಿತ್ವಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!