DCRB ಪೊಲೀಸ್ ತಂಡದಿಂದ ಮತ್ತೊಂದು ಭರ್ಜರಿ ಬೇಟೆ.! 24 ಟನ್ ಪಡಿತರ ಅಕ್ಕಿ ವಶ

ದಾವಣಗೆರೆ: ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡಾ ಕ್ರಾಸ್ ಸಮೀಪ ಬೈಪಾಸ್ ರಸ್ತೆಯಲ್ಲಿ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ 246 ಕ್ವಿಂಟಾಲ್ ಪಡಿತರ ಅಕ್ಕಿ ಮತ್ತು 1 ಲಾರಿಯನ್ನು ಖಚಿತ ಮಾಹಿತಿ ಮೇರೆಗೆ ಡಿಸಿಆರ್ ಬಿ ಘಟಕದ ಪೊಲೀಸ್ ಉಪಾಧೀಕ್ಷರಾದ ಬಿ ಎಸ್ ಬಸವರಾಜ್ ನೇತೃತ್ವದ ಪೊಲೀಸ್ ತಂಡ ದಾಳಿ ಮಾಡಿ, ಒಬ್ಬ ಆರೋಪಿತನನ್ನು ದಸ್ತಗಿರಿ ಮಾಡಲಾಗಿರುತ್ತದೆ.
ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ನಂ 285/21 ಕಲಂ 3&7 ಇಸಿ ಆಕ್ಟ್ ಮತ್ತು ಕಲಂ ,18, ಪಿಡಿಎಸ್ ಆರ್ಡರ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ತಿಂಗಳಿನಲ್ಲಿ ಡಿಸಿಐಬಿ ಘಟಕದ ವತಿಯಿಂದ ಅಂದಾಜು 100 ಟನ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ದಾವಣಗೆರೆ ಪೂರ್ವ ವಲಯ ದಲ್ಲಿಯೇ ಅತಿ ಹೆಚ್ಚು ಇಸಿ ಆಕ್ಟ್ ನಡಿ ಕೇಸ್ ಗಳನ್ನ ದಾವಣಗೆರೆ ಡಿ ಸಿ ಆರ್ ಬಿ ಘಟಕದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸುವ ಮೂಲಕ ಅಕ್ರಮ ದಂಧೆಕೋರರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.