ಹಾನಗಲ್ ಕ್ಷೇತ್ರದಲ್ಲಿ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿರುವುದು ತೃಪ್ತಿದಾಯಕವಾಗಿದೆ- ಡಿ.ಬಸವರಾಜ್

ದಾವಣಗೆರೆ :ಕೆಪಿಸಿಸಿ ವತಿಯಿಂದ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ತಮ್ಮನ್ನು ವೀಕ್ಷಕರನ್ನಾಗಿ ನೇಮಿಸಿದಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರಿಗೆ ಹಾಗೂ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ರವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಕೆಪಿಸಿಸಿ ವಕ್ತಾರರಾದ ಡಿ.ಬಸವರಾಜ್ ಹೇಳಿದ್ದಾರೆ.
ಇಂದು ಕಾಂಗ್ರೆಸ್ ಮುಖಂಡರು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಾನಗಲ್ ಉಪ ಚುನಾವಣೆ ತುಂಬಾ ಸವಾಲಿನದ್ದಾಗಿತ್ತು. ಮುಖ್ಯಮಂತ್ರಿ ಮಂತ್ರಿಗಳ ತವರು ಜಿಲ್ಲೆ ಆಗಿದ್ದರಿಂದ ಆಡಳಿತ ಪಕ್ಷಕ್ಕೆ ಈ ಉಪ ಚುನಾವಣೆ ಪ್ರತಿಷ್ಠೆಯ ಕಣವಾಗಿತ್ತು ಇಂಥಾ ಸವಾಲಿನ ಸಂಧರ್ಭದಲ್ಲಿ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿರುವುದು ತೃಪಿದಾಯಕವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು
ನಮ್ಮ ಅಭ್ಯರ್ಥಿ ಶ್ರೀನಿವಾಸ್ ಮಾನೆಯವರು ಕಳೆದ ಮೂರು ವರ್ಷಗಳಲ್ಲಿ ಕೈಗೊಂಡಿದ್ದ ಜನಪರ ಕೆಲಸಗಳೇ ಇಂದು ಅವರ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದೆ. ಜೊತೆಗೆ ನಮ್ಮ ಕೆಪಿಸಿಸಿಯ ಅತ್ಯಂತ ಕ್ರಿಯಾಶೀಲ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ರವರ ಶ್ರಮ ಅತಿ ಹೆಚ್ಚಿನ ರೀತಿಯಲ್ಲಿತ್ತು ಸುಮಾರು ಒಂದು ತಿಂಗಳಿಗೂ ಹೆಚ್ಚಿನ ಕಾಲ ಮನೆ ಹಾಗೂ ವೈಯುಕ್ತಿಕ ಕಾರ್ಯ,ಹಬ್ಬ ಎಲ್ಲಾ ಬದಿಗೊತ್ತಿ ಚುನಾವಣಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರಿಂದ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ರವರು ಹಾಗೂ ಸಿದ್ದರಾಮಯ್ಯನವರು ಬಿಜಿಪಿ ಸರ್ಕಾರದ ಆಡಳಿತ ವೈಫಲ್ಯಗಳನ್ನು,ಅವರ ಭ್ರಷ್ಟಾಚಾರಗಳನ್ನು, ಎಳೆ ಎಳೆಯಾಗಿ ಹಾನಗಲ್ ಕ್ಷೇತ್ರದ ಜನತೆಗೆ ಅರ್ಥೈಸಿದ್ದರಿಂದ ಸವಾಲಿನ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಲು ಸಾಧ್ಯವಾಗಿದ್ದು ಎಂದು ಎಲ್ಲಾ ನಾಯಕರು ಶ್ರಮ ವಹಿಸಿದ್ದನ್ನು ಶ್ಲಾಘಿಸಿದರು.
ಇದೆ ಸಂಧರ್ಭದಲ್ಲಿ ಇನ್ನಿತರೆ ವೀಕ್ಷಕರಾಗಿ ಆಯ್ಕೆಯಾಗಿದ್ದ ಪಾಲಿಕೆ ಮಾಜಿ ಉಪ ಮಹಾ ಪೌರರಾದ ಕೆ.ಚಮನ್ ಸಾಬ್, ಮಾಜಿ ನಗರಸಭಾಧ್ಯಕ್ಷರಾದ ಆರ್.ಹೆಚ್.ನಾಗಭೂಷಣ್,ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್ ಇವರನ್ನೂ ಸಹ ಸನ್ಮಾನಿಸಲಾಯಿತು ಕಾಂಗ್ರೆಸ್ ಪಕ್ಷ ನೀಡಿದ್ದ ಜವಾಬ್ದಾರಿಗೆ ತಮ್ಮ ಅಳಿಲುಸೇವೆ ಸಲ್ಲಿಸಿದಕ್ಕೆ ಗುರುತಿಸಿದ ದಾವಣಗೆರೆ ಕಾಂಗ್ರೆಸ್ ಮುಖಂಡರಿಗೆ ಧನ್ಯವಾದಗಳನ್ನು ಸನ್ಮಾನಿತರು ಇದೇ ಸಂಧರ್ಭದಲ್ಲಿ ತಿಳಿಸಿದರು ಈ ಕಾರ್ಯಕ್ರಮದಲ್ಲಿ ಇಂಟಕ್ ಜಿಲ್ಲಾಧ್ಯಕ್ಷರಾದ ಮಂಜುನಾಥ್, ಮುಖಂಡರಾದ ಮೊಹಮ್ಮದ್ ಜಿಕ್ರಿಯಾ,ಲಿಯಾಖತ್ ಅಲಿ,ಡಿ ಶಿವಕುಮಾರ್ ,ಮಹಬೂಬ್ ಬಾಷಾ,ಇನ್ನಿತರರು ಭಾಗವಹಿಸಿದ್ದರು.