ರಾಜ್ಯದಲ್ಲಿ ಕೊವಿಡ್ ಸೊಂಕು ತಗ್ಗಿದ ಹಿನ್ನೆಲೆ ರಾತ್ರಿ ಕರ್ಪ್ಯೂ ರದ್ದುಗೊಳಿಸಿದ ಸರ್ಕಾರ

IMG-20211105-WA0097

ಬೆಂಗಳೂರು : ಪಿ ರವಿಕುಮಾರ್ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕಾರ್ಯಕಾರಿ ಸಮಿತಿ 03-07-2021 ಮತ್ತು ಅದಕ್ಕೆ ಸಂಬಂಧಪಟ್ಟ ಆದೇಶಗಳನ್ನು ಮುಂದುವರೆಸಿ ವಿಪತ್ತು ನಿರ್ವಹಣಾ ಕಾಯ್ದೆ , 2005 ರ ಸೆಕ್ಷನ್ 24 ( ಎಲ್ ) , ತಕ್ಷಣದಿಂದ ಜಾರಿಗೆ ಬರುವಂತೆ ಮೇಲೆ ತಿಳಿಸಿದ ಆದೇಶಗಳಿಗೆ ಈ ಕೆಳಕಂಡಂತೆ ಮಾರ್ಪಾಡುಗಳನ್ನು ಹೊರಡಿಸಿದ್ದಾರೆ .

ರಾತ್ರಿ 10:00 ಗಂಟೆಯಿಂದ ಬೆಳಿಗ್ಗೆ , 05:00 ಗಂಟೆಯವರೆಗೆ ವಿಧಿಸಲಾಗಿದ್ದ ರಾತ್ರಿ ಕರ್ಪೂ ವನ್ನು ಈ ಮೂಲಕ ಹಿಂಪಡೆಯಲಾಗಿದೆ .

ಕೋವಿಡ್ -19 ಸಮುಚಿತ ವರ್ತನೆಗಳು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೊರಡಿಸಿದ ಪ್ರಮಾಣಿಕ ಕಾರ್ಯ ವಿಧಾನಗಳನ್ನು ( SOPS ) ಕಟ್ಟುನಿಟ್ಟಾಗಿ ಪಾಲಿಸುವ ಷರತ್ತುಗಳಿಗೊಳಪಟ್ಟು ಕುದುರೆ ಓಟದ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿದೆ .

ಸ್ಮಳಾವಕಾಶದ ಸಾಮರ್ಥ್ಯದಷ್ಟು ಮಾತ್ರ ಕುದುರ ಓಟದ ಪೋಷಕರು ( racing patrons ) ಕುದುರೆ ಓಟದ ಪಂದ್ಯಗಳಲ್ಲಿ ಭಾಗವಹಿಸತಕ್ಕದ್ದು ಮತ್ತು ಪೂರ್ಣವಾಗಿ ಕೋವಿಡ್ 19 ಲಸಿಕೆಯನ್ನು ಪಡೆದಂತಹ ವ್ಯಕ್ತಿಗಳಿಗೆ ಮಾತ್ರ ಇಂತಹ ಸ್ಥಳಗಳಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!