ಪಾಲಿಕೆ ಅಧಿಕಾರಿಗಳ ಜೊತೆ ಕಾಮಗಾರಿ ನಡೆಯುವ ಸ್ಥಳಕ್ಕೆ ಮೇಯರ್ ಎಸ್ ಟಿ ವಿರೇಶ್ ಭೇಟಿ

ದಾವಣಗೆರೆ: ಇಂದು ರಾತ್ರಿ ದಾವಣಗೆರೆ ಮಹಾನಗರ ಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್ ರವರು ಅಧಿಕಾರಿಗಳ ಜೊತೆ ನಗರದ ವಿಜಯಲಕ್ಷ್ಮಿ ರೋಡ್, ಕಾಯಿಪೇಟೆ,ದೊಡ್ಡ ಪೇಟೆ,
ಸಿಟಿ ರೌಂಡ್ಸ ಹಾಕಿದರು ವಿಜಯಲಕ್ಷ್ಮಿ ರಸ್ತೆಯಲ್ಲಿ ನಡೆಯುತ್ತಿರುವ ರಾಜ ಕಾಲುವೆ
ಕಾಮಗಾರಿಯನ್ನು ವೀಕ್ಷಿಸಿ ಸ್ಮಾರ್ಟ್ ಸಿಟಿ ಇಂಜಿನಿಯರ ಗೆ ಕರೆ ಮಾಡಿ ಶೀಘ್ರವಾಗಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು, ದೊಡ್ಡ ಪೇಟೆ ವಿರಕ್ತ ಮಠದ ಎದುರು ಸ್ಟ್ರೀಟ್ ಲೈಟ್ ಕಂಬ ಇಲ್ಲದಿರುವವದನ್ನು ಕಂಡು ಇಲ್ಲಿ ಗ್ಯಾಪಿನ ವಿವರಣೆ ಪಡೆದು ಕಂಬವನ್ನು ಅಳವಡಿಸಿಸಲು ಅಧಿಕಾರಿಗಳಿಗೆ ಸೂಚಿಸಿದರು
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್,ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ್ ಮಹಾನಗರಪಾಲಿಕೆ ಎಸ್.ಸಿ. ಉದಯಕುಮಾರ್,ಪಾಲಿಕೆ ಅಧಿಕಾರಿಗಳಾದ ಕಿರಣ ಕುಮಾರ್ ಯುಸೋಪ್,ಸುನಿಲ್, ಉಪಸ್ಥಿತರಿದ್ದರು.