ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆ: ಚುನಾವಣೆಯ ತಂತ್ರಗಾರಿಕೆ: ಬಸವರಾಜು ವಿ ಶಿವಗಂಗಾ

ಚನ್ನಗಿರಿ : ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಗಗನಕ್ಕೇರಿದ್ದು ಇದೀಗ ಬೆಲೆ ಇಳಿಕೆಯಾಗುತ್ತಿದೆ. ಬಿಜೆಪಿ ಸರ್ಕಾರ ಆಡಿಳಿತಕ್ಕೆ ಬಂದ ದಿನದಿಂದಲೂ ಬೆಲೆ ಹೆಚ್ಚಳ ಮಾಡಿದ್ದು ಇದೀಗ ಎಳೆಂಟು ರೂಪಾಯಿ ಕಡಿಮೆ ಮಾಡಲಾಗಿದೆ. ಇದು ಚುನಾವಣೆಗೆ ಬಿಜೆಪಿ ಮಾಡುತ್ತಿರುವ ಮತ್ತೊಂದು ಮೋಸ ವಾಗಿದೆ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ತಿಳಿಸಿದರು. 70 ರೂಪಾಯಿ ಇದ್ದ ಪೆಟ್ರೋಲ್ ಬೆಲೆ ನೂರು ರೂಪಾಯಿ ಗಡಿ ದಾಟಿತ್ತು ಜನ ಸಾಮಾನ್ಯ ಇದರ ವಿರುದ್ಧ ದನಿ ಎತ್ತಿದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಿವಿ ಕೇಳದಂತೆ ನಾಟಕ ಮಾಡುತ್ತಿತ್ತು. ಇದೀಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಇಳಿಸುವ ಮೂಲಕ ಸುಣ್ಣದಂತ ಬೆಣ್ಣೆಯನ್ನ ಜನರಿಗೆ ಹಚ್ಚಲು ಮುಂದಾಗುತ್ತಿದೆ ಎಂದರು. ತಿಂಗಳಿಗೆ ಆರೇಳು ಬಾರಿ ಬೆಲೆ ಹೆಚ್ಚಳ ಮಾಡಿ ಜನರ ಜೇಬಿಗೆ ಕತ್ತರಿ ಹಾಕಿರುವ ಸರ್ಕಾರ ಇದೀಗ ಏಳೆಂಟು ರೂಪಾಯಿ ಕಡಿಮೆ ಮಾಡಿದ ಕೂಡಲೇ ಜನರು ನಿಮ್ಮನ್ನ ನಂಬಲ್ಲ ಬರುವ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು. ಇತ್ತೀಚೆಗೆ ಸಿಎಂ ಬೊಮ್ಮಾಯಿ ಅವರ ತವರು ಜಿಲ್ಲೆ ಹಾನಗಲ್ ಉಪ ಚುನಾವಣೆಯಲ್ಲಿ ಸೋತ ಹಿನ್ನೆಲೆ ಬೆಲೆ ಇಳಿಕೆಯಂತ ತಂತ್ರಗಾರಿಕೆಗೆ ಮುಂದಾಗಿದೆ. ಇಂಥ ನಾಟಕಗಳನ್ನ ಜನರು ಒಪ್ಪುವುದಿಲ್ಲ ಎಂದರು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಬೆಲೆ ಇಳಿಕೆ ಮಾಡಿದರೆ ಹೇಗೆ ನಿಮ್ಮ ಆಡಳಿತವನ್ನ ಒಪ್ಪಲಾಗುತ್ತದೆ. ಬೆಲೆ ಹೆಚ್ಚಳದಿಂದ ಈಗಾಗಲೇ ಜನರು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಐದಾರು ರೂಪಾಯಿ ಕಡಿಮೆಯಾದ ಕೂಡಲೇ ಜನರ ಸಮಸ್ಯೆ ಬಗೆಹರಿಯುವುದಿಲ್ಲ, ಇಂಥ ತಂತ್ರಗಾರಿಕೆ ಮೋಸದ ಆಡಳಿತವನ್ನ ಜನರು ಒಪ್ಪಲ್ಲ ಮುಂದಿನ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ತಿಳಿಸಿದರು