ಹೊನ್ನಾಳಿ ಪೋಲಿಸ್ ಭರ್ಜರಿ ಬೇಟೆ: 4 ಜನ ಅಡಿಕೆ ಕಳ್ಳರ ಬಂಧನ.! 3 ಲಕ್ಷ ಮೌಲ್ಯದ ಅಡಿಕೆ ವಶ

IMG-20211108-WA0104

ದಾವಣಗೆರೆ: ನಾಲ್ವರು ಅಡಿಕೆ ಕಳ್ಳರನ್ನು ಬಂಧಿಸಿರುವ ಹೊನ್ನಾಳಿ ಪೊಲೀಸರು ಆರೋಪಿತರಿಂದ ಸುಮಾರು 03 ಲಕ್ಷ ಮೌಲ್ಯದ ಅಡಿಕೆ ವಶಪಡಿಸಿಕೊಂಡಿದ್ದಾರೆ.

ಹೊನ್ನಾಳಿ ತಾಲ್ಲೂಕಿನ ಬೀರಗೊಂಡನಹಳ್ಳಿ ಗ್ರಾಮದ ಸತೀಶ್ ಎಂಬುವರು ಮನೆಯ ಮುಂಭಾಗದಲ್ಲಿ ಒಣಗಲು ಹರಡಿದ್ದ ಅಡಿಕೆಯಲ್ಲಿ ಸುಮಾರು 5 ಕ್ವಿಂಟಾಲ್ ಗೂ ಅಧಿಕ ಅಂದಾಜು 2,25 ಲಕ್ಷ ಬೆಲೆ ಬಾಳುವ ಅಡಿಕೆಯನ್ನು ಕಳ್ಳತನ ಮಾಡಿ ಕೊಂಡು ಹೋಗಿರುವ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ಬಗ್ಗೆ ಹೊನ್ನಾಳಿ ವೃತ್ತ ಸಿಪಿಐ ದೇವರಾಜ.ಟಿ.ವಿ, ಪಿಎಸ್‌ಐ ಬಸವರಾಜ ಬಿರಾದರ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ 04 ಜನ ಆರೋಪಿತರನ್ನು ದಸ್ತಗರಿ ಮಾಡಿದೆ. ಆರೋಪಿತರ ಮೇಲೆ ಒಟ್ಟು 03 ಅಡಿಕೆ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಒಟ್ಟು 3 ಲಕ್ಷ ರೂ., ಬೆಲೆ ಬಾಳುವ 07 ಕ್ವಿಂಟಾಲ್ 85 ಕೆಜಿ ಒಣ ಅಡಿಕೆಯನ್ನು ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿತರನ್ನು ಮತ್ತು ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಚನ್ನಗಿರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಸಂತೋಷ್ ಕೆ, ಸಿಪಿಐ ಹೊನ್ನಾಳಿ ವೃತ್ತ ದೇವರಾಜ.ಟಿ.ವಿ, ಪಿಎಸ್‌ಐ ಬಸವರಾಜ ಬಿರಾದರ ಹೊನ್ನಾಳಿ ಠಾಣೆ ಹಾಗೂ ಸಿಬ್ಬಂದಿಗಳಾದ ಧರ್ಮಪ್ಪ, ರಾಜು ವಿ, ಜಗದೀಶ್, ಬೋಜಪ್ಪ ಕಿಚಡಿ, ಯೋಗೀಶ್, ಚೇತನ್ ಕುಮಾರ್ ಎನ್ ಎಸ್., ಮೌನೇಶ ಚಾರಿ, ಶಾಂತರಾಜ, ರಾಘವೇಂದ್ರ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!