ರಾಜ್ಯದಲ್ಲಿ ಐತಿಹಾಸಿಕ ದಾಖಲೆ ಬರೆದ ಪುನೀತ್ ಅಭಿಮಾನಿಗಳು.! ಒಂದೇ ದಿನದಲ್ಲಿ 3000 ಕ್ಕೂ ಹೆಚ್ಚು “ ಅಪ್ಪು ಫ್ಯಾನ್ಸ್ ” ನೇತ್ರದಾನ.!

IMG-20211110-WA0061

ಬೆಂಗಳೂರು : ನಟ ಪುನೀತ್ ರಾಜ್ ಕುಮಾರ್ ಪುಣ್ಯ ಸ್ಮರಣೆ ಅಂಗವಾಗಿ ಅಪ್ಪು ಅಭಿಮಾನಿಗಳಿಗೆ ದೊಡ್ಡನೆ ಕುಟುಂಬದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಅಪ್ಪು ಸಾವಿನ ನಂತರ ರಾಜ್ಯಾದ್ಯಂತ ನೇತ್ರದಾನ ವಿಚಾರದಲ್ಲಿ ಹೊಸ ದಾಖಲೆ ಬರೆದಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಪ್ಪು ಅಭಿಮಾನಿಗಳು ಆಸ್ಪತ್ರೆಗೆ ಬಂದು ಹೆಸರು ನೊಂದಾಯಿಸಿಕೊಂಡಿದ್ದಾರೆ. ಇತ್ತೀಚೆಗೆ ಬಂದ ಮಾಹಿತಿ ಪ್ರಕಾರ ರಾಜ್ಯದಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಧಿಡೀರ್ ಆಗಿ ಶೇ.30 ಕ್ಕೆ ಏರಿದೆ. ಇಂದು ನಾರಾಯಣ ನೇತ್ರಾಲಯ ಸಹಯೋಗದೊಂದಿಗೆ ನೇತ್ರದಾನ ಕ್ಯಾಂಪ್ ಆಯೋಜಿಸಲಾಗಿತ್ತು, ಈ ಸಂದರ್ಭದಲ್ಲಿ ಬರೋಬ್ಬರಿ 3100 ಜನರು ನೇತ್ರದಾನಕ್ಕೆ ನೊಂದಣಿ ಮಾಡಿಕೊಂಡಿದ್ದಾರೆ. ಈ ಮೂಲಕ ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!