ನಟ ರಮೇಶ್ ಅರವಿಂದ ಪೊಲೀಸ್ ಅಧಿಕಾರಿಯಾಗಿ ನಟಿಸಿ, ನಿರ್ದೇಶಿಸಿರುವ ‘100’ ಚಿತ್ರ ಬಿಡುಗಡೆಗೆ ಮೂಹುರ್ತ ಫಿಕ್ಸ್

ದಾವಣಗೆರೆ: ಪುನೀತ್ ರಾಜಕುಮಾರ್ ಅವರ ಸಾವು ನಿಜಕ್ಕೂ ಚಿತ್ರರಂಗಕ್ಕೆ ದೊಡ್ಡ ಶಾಕ್ ನೀಡಿದ್ದು, ಜಿಮ್, ವ್ಯಾಯಾಮದಿಂದಲೇ ಅವರಿಗೆ ಹೀಗಾಯಿತಾ? ಜಿಮ್ ಅವಶ್ಯಕವಾ ಎಂಬ ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ. ಆದರೆ, ಸ್ವಾಸ್ಥ್ಯ ಆರೋಗ್ಯಕರ ಬದುಕಿಗೆ ವ್ಯಾಯಾಮ ಅವಶ್ಯಕವಾಗಿದೆ ಎಂದು ನಟ, ನಿರ್ದೇಶಕ ರಮೇಶ್ ಅರವಿಂದ್ ಹೇಳಿದರು.
ತಾವು ಅಭಿನಯಿಸಿ, ನಿರ್ದೇಶಿಸಿರುವ ‘100’ ಕನ್ನಡ ಚಿತ್ರ ಬಿಡುಗಡೆ ಸಂಬಂಧ ದಾವಣಗೆರೆಯ ಖಾಸಗಿ ಹೋಟೆಲ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುನೀತ್ ಅವರ ದಿಢೀರ್ ಅಗಲಿಕೆ ಚಿತ್ರರಂಗಕ್ಕೆ ಭಾರೀ ನಷ್ಟವಾಗಿದೆ. ಆದರೆ, ಅವರು ಜಿಮ್, ವ್ಯಾಯಾಮ ಮಾಡಿರುವುದರಿಂದಲೇ ಅವರಿಗೆ ಹೀಗಾಯಿತಾ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಅಸಲಿಗೆ ಅಗತ್ಯವಾದಷ್ಟು ವ್ಯಾಯಮ ಎಲ್ಲರಿಗೂ ಅಗತ್ಯ ಎಂದು ಅಭಿಪ್ರಾಯಿಸಿದರು.
ತಾವು ಪೊಲೀಸ್ ಅಧಿಕಾರಿಯಾಗಿ ನಟಿಸಿ, ನಿರ್ದೇಶಿಸಿರುವ ‘100’ ಕನ್ನಡ ಚಿತ್ರವು ಇದೇ ನ.19 ರಂದು ತೆರೆಗೆ ಬರಲಿದ್ದು, ರಚಿತಾ ರಾಮ್, ಪೂರ್ಣ, ಪ್ರಕಾಶ್ ಬೆಳವಾಡಿ, ಮಾಲತಿ ಸುಧೀರ್, ರಾಜು ತಾಳೀಕೋಟೆ ತಾರಾಗಣದಲ್ಲಿದ್ದಾರೆ. ಗೌರವ್ ಎಂಬ ಹೊಸ ನಟರನ್ನು ಪರಿಚಯಿಸಲಾಗಿದೆ ಎಂದರು.