ಮದುವೆಯಲ್ಲಿ ಕೇಕ್ ಕಟ್ ಮಾಡೋದು ಶಾಂಪೆನ್ ಹಾರಿಸೋದನ್ನ ಕೊಡವ ಸಮಾಜ ನಿಷೇಧಿಸಲು ಮುಂದಾಗಿದ್ದು ಯಾಕೆ.?

ಕೊಡಗು : ಕೊಡಗು ಪ್ರವಾಸಿ ತಾಣಗಳತವರೂರು ಅಷ್ಟೇ ಅಲ್ಲ , ಕೊಡವರ ಆಚಾರ ವಿಚಾರಗಳು ಕೂಡ ಅತೀ ವಿಶಿಷ್ಟ . ಆದರೆ ಇತ್ತೀಚೆಗೆ ಕೊಡವರ ವಿವಾಹ ಸಮಾರಂಭಗಳಲ್ಲಿ ಕೆಲವರು ಕೇಕ್ ಕತ್ತರಿಸುವುದು, ಶಾಂಪೆನ್ ಹಾರಿಸೋದನ್ನು ರೂಢಿಸಿಕೊಳ್ಳುತ್ತಿದ್ದಾರೆ .
ಇದು ಕೊಡವ ಸಂಸ್ಕೃತಿಗೆ ಧಕ್ಕೆ ತರುವ ಆತಂಕ ಎದುರಾಗಿದೆ . ಹೀಗಾಗಿಯೇ ಕೊಡಗಿನ ಪೊನ್ನಂಪೇಟೆ ಕೊಡವ ಸಮಾಜ ಮತ್ತು ವಿರಾಜಪೇಟೆ ಕೊಡವ ಸಮಾಜಗಳು ವಿವಾಹ ಸಮಾರಂಭದಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೆನ್ ಹಾರಿಸೋದನ್ನು ನಿಷೇಧಿಸಿವೆ .ಇತ್ತೀಚೆಗೆ ಸಭೆ ನಡೆಸಿರುವ ಎರಡು ಸಮಾಜಗಳು ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿರುವುದು ಒಂದು ರೀತಿಯಲ್ಲಿ ಚರ್ಚೆಗೆ ಗ್ರಾಸವಾಗಿದ್ದರೆ ಸಾಕಷ್ಟು ಜನರು ಇದು ಅತ್ಯಂತ ಒಳ್ಳೆಯ ನಿರ್ಧಾರ ಎಂದಿದ್ದಾರೆ .
ಇನ್ನು ಮುಂದೆ ಒಂದು ವೇಳೆ ವಿವಾಹದಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೆನ್ ಹಾರಿಸೋದನ್ನು ಮಾಡಿದ್ರೆ ಅಂತಹ ಮದುವೆಗಳಿಗೆ ಬ್ರೇಕ್ ಹಾಕಲಾಗುತ್ತದೆ ಎನ್ನೋ ಎಚ್ಚರಿಕೆಯನ್ನು ಎರಡು ಕೊಡವ ಸಮಾಜಗಳು ನೀಡಿವೆ .
*ಕೇಕ್ ಕತ್ತರಿಸೋದು ಮತ್ತು ಶಾಂಪೆನ್ ಹಾರಿಸೋದನ್ನು ಕೊಡವ ಸಮಾಜಗಳು ನಿಷೇಧಿಸುತ್ತಿರುವುದಾದರೂ ಏಕೆ ?*
ಹೌದು ಕೊಡವರು ಪ್ರಕೃತಿ ಆರಾಧಕರು . ಅವರ ಸಂಸ್ಕೃತಿಯೇ ವಿಶಿಷ್ಟ . ಅಷ್ಟಕ್ಕೂ ವಿವಾಹಕ್ಕೆ ನಿಶ್ಚಿತಾರ್ಥ ಆಯಿತ್ತೆಂದರೆ ಬಳಿಕ ಯುವಕ ಗಡ್ಡ ಬೋಳಿಸುವಂತಿಲ್ಲ . ಮದುವೆ ದಿನ ಗಡ್ಡ ತೆಗೆದು ವಿವಾಹಕ್ಕೆ ಸಿದ್ಧವಾಗಬೇಕು . ಮದುವೆಯ ದಿನ ಗಡ್ಡವನ್ನು ಬಿಡುವಂತಿಲ್ಲ .