ಕಲ್ಯಾಣ ಕರ್ನಾಟಕ ನಿಗಮದ‌ ಸಾರಿಗೆ ಬಸ್ಸುಗಳಲ್ಲಿ ಇನ್ನುಮುಂದೆ ಜೋರಾಗಿ ಹಾಡು/ಪದ್ಯ/ವಾರ್ತೆ/ಸಿನಿಮಾ/ ಇತ್ಯಾದಿ ಹಾಕುವುದು ನಿರ್ಬಂಧ

IMG_20211111_165836

ಕೊಪ್ಪಳ :ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ದಿಂದ ಒಂದು ಮಹತ್ವದ ಆದೇಶ ಹೊರಡಿಸಿದ್ದು ಇನ್ನು ಮುಂದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಮೊಬೈಲ್ ಗಳಲ್ಲಿ ಜೋರಾಗಿ ಹಾಡುಗಳನ್ನು ಹಾಕುವಂತಿಲ್ಲ

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಮೊಬೈಲ್ ದೂರವಾಣಿ ಮೇಲೆ ಬಹಳಷ್ಟುಅವಲಂಬಿತರಗಿವುದರಿಂದ
ಮೊಬೈಲ್ ಸಾರ್ವಜನಿಕರು ಬಸ್ಸಿನಲ್ಲಿ ಮೊಬೈಲ್ ದೂರವಾಣಿಯ ಮೂಲಕ ಜೋರಾಗಿ ಹಾಡು / ಪದ್ಯ / ವಾರ್ತೆ / ಸಿನಿಮಾ ಇತ್ಯಾದಿ ಹಾಕುತ್ತಿದ್ದು , ಇದರಿಂದ ಶಬ್ದ ಮಾಲನ್ಯ ಹಾಗೂ ಬಸ್ಸಿನಲ್ಲಿ ಪ್ರಯಾಣಿಸುವ ಇತರೆ ಸಹ ಪ್ರಯಾಣಿಕರಿಗೆ ತೊಂದರೆವುಂಟಾಗುತ್ತಿರುವುದು ಮನಗೊಂಡು ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ

ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಿಂದ ಹೊರಡಿಸಿದ ಸುತ್ತೋಲೆ

ಈ ಸಂಬಂಧ ಸಾರ್ವಜನಿಕ ಸಾರಿಗೆಗಳಲ್ಲಿ ಶಬ್ದಮಾಲನ್ಯ ನಿಯಂತ್ರಿಸುವ ನಿಟ್ಟಿನಲ್ಲಿ . ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಉಚ್ಚನ್ಯಾಯಾಲಯದಲ್ಲಿ ದಾಖಲಾಗಿದ್ದು .

ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989 , ನಿಯಮ 94 ( 1 ) ( V ) ನ್ನು ಉಲ್ಲಂಘಿಸಿ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರು ಮೊಬೈಲ್ ದೂರವಾಣಿ ಮೂಲಕ ಜೋರಾಗಿ ಶಬ್ದ ಹೊರಸೂಸುವಂತೆ ಹಾಡು / ಪದ್ಯ : / ವಾರ್ತೆ / ಸಿನಿಮಾ ಇತ್ಯಾದಿ ಹಾಕುವುದರಿಂದ ಶಬ್ದಮಾಲಿನ್ಯ ಉಂಟಾಗುವುದರಿಂದ ” ನಿಗಮದ ಬಸ್ಸುಗಳಲ್ಲಿ ದೂರವಾಣಿಯ ಮೂಲಕ ಜೋರಾಗಿ ಹಾಡು / ಪದ್ಯ / ವಾರ್ತೆ / ಸಿನಿಮಾ ಇತ್ಯಾದಿ_ಹಾಕುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ ,

ಈ ಸಂಬಂಧ ಕರ್ತವ್ಯ ನಿರತ ಚಾಲಕರು ಹಾಗೂ ನಿರ್ವಾಹಕ ಪ್ರಯಾಣಿಕರಿಗೆ ಸೂಕ್ತ ತಿಳುವಳಿಕೆ ನೀಡಿ ಹಾಗೂ ಹೆಚ್ಚಾಗಿ ಶಬ್ದ ಬರುವಂತೆ ಹಾಗೂ ಸಹಪ್ರಯಾಣಿಕರಿಗೆ ತೊಂದರೆಯಾಗುತ್ತಿರುವಂತೆ ಮೊಬೈಲ್ ದೂರವಾಣಿ ಬಳಸುತ್ತಿದ್ದು ಆ ರೀತಿ ಬಳಸದಂತೆ ವಿನಂತಿಸುವುದು ,
ಒಂದು ವೇಳೆ ಸದರಿ ಪ್ರಯಾಣಿಕ ವಿನಂತಿಗೆ ಮನ್ನಣೆ ನೀಡದೇ ಕರ್ನಾಟಕ ಮೋಟಾರು ವಾಹನಗಳ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡುಲ್ಲಿ , ಪ್ರಯಾಣಿಕರನ್ನು ಚಾಲಕ ಅಥವಾ ನಿರ್ವಾಹಕ ನಿಗಮದ ಬಸ್ಸಿನಿಂದ ಇಳಿಸಬಹುದು ಅಂತಹ ಪ್ರಯಾಣಿಕರಿಗೆ ಪ್ರಯಾಣ ದರವನ್ನು ಹಿಂತಿರುಗಿಸುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದೆ

Leave a Reply

Your email address will not be published. Required fields are marked *

error: Content is protected !!