ಬಿ ಎಸ್ ಯಡಿಯೂರಪ್ಪ ಪುತ್ರಿ ಶಾಮನೂರು ಶಿವಶಂಕರಪ್ಪ ಮನೆಯಲ್ಲಿ.! ಇಬ್ಬರ ಭೇಟಿಯ ವಿಷಯವೇನೆಂದರೆ.!

IMG-20211111-WA0189

ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ರಾಜ್ಯಧ್ಯಕ್ಷರು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರಿ ಅರುಣಾದೇವಿ ದಾವಣಗೆರೆಗೆ ಆಗಮಿಸಿದ್ದರು.

ಇದೇ ವೇಳೆ ಅರುಣಾದೇವಿ ಅವರು ಮಹಾಸಭಾದ ರಾಷ್ಟ್ರಾಧ್ಯಕ್ಷರಾಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಮಹಿಳಾ ಘಟಕ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಮುಂಬರುವ ಕಾರ್ಯಕ್ರಮದ ಸಮಾಲೋಚನೆ, ಜನಗಳಲ್ಲಿ ಅರಿವು, ಮಕ್ಕಳಿಗೆ ಲಿಂಗಧಾರಣೆ, ಹೆಣ್ಣು ಮಕ್ಕಳಿಗೆ ಸ್ವಸಹಾಯ, ರೂಪರೇಶಗಳನ್ನು ಮಾಡುವುದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ರಾಜ್ಯಧ್ಯಕ್ಷ ಅರುಣ್ ಕುಮಾರಿ ಚರ್ಚೆ ನಡೆಸುತ್ತಿರುವುದು

ಸಭೆಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಉಮಾ ರಮೇಶ್, ನಗರ ಅಧ್ಯಕ್ಷ ಪುಷ್ಪಾ ವಾಲಿ, ಹರಿಹರ ನಗರ ಅಧ್ಯಕ್ಷೆ ಅಶ್ವಿನಿ, ಮಾಜಿ ಮೇಯರ್ ಆಶ್ವಿನಿ, ಶೋಭ ಪಲ್ಲಾಗಟ್ಟಿ, ಪದಾಧಿಕಾರಿಗಳಾದ ದ್ರಾಕ್ಷಯಣಿ, ಶೋಭ ಕೋಟ್ರೇಶ್, ಮಂಜುಳ ಮಹೇಶ್, ಮಂಗಳಾ, ಸುಮಂಗಲ, ಮಂಜುಳ ಗದ್ದಗೇಶ್, ಕವಿತ ಲಕ್ಷ್ಮೀ, ರೂಪ, ರೇಖ, ಸುನಂದ, ಕಾರ್ಯದರ್ಶಿಗಳು, ಸದಸ್ಯರು, ಮತ್ತಿತ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!